ದೇಶದಾದ್ಯಂತ 24 ಗಂಟೆಯಲ್ಲಿ 14,148 ಮಂದಿಗೆ ಕೊರೋನಾ,302 ಸಾವು
ನವದೆಹಲಿ, ಫೆ.24- ಕಳೆದ ಎರಡು ವಾರಗಳಿಂದ ದೇಶಾದ್ಯಂತ ಕೊರೊನಾ ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿವೆ. 20 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಕಳೆದ 24 ಗಂಟೆಗಳಲ್ಲಿ 14,148 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 302 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ದೇಶದಲ್ಲಿ ಈ ಸೋಂಕಿಗೆ ಒಟ್ಟು ಬಲಿಯಾದವರ ಸಂಖ್ಯೆ 5,12,924ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ 1,48,359 ಸಕ್ರಿಯ ಪ್ರಕರಣಗಳಿವೆ.ನಿನ್ನೆ ಕೋವಿಡ್‍ನಿಂದ 30,009 ಮಂದಿ ಚೇತರಿಸಿಕೊಂಡಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 4,22,19,890ಕ್ಕೆ ಏರಿಕೆಯಾಗಿದೆ. ಕೊರೊನಾ ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ನೀಡಲಾಗುತ್ತಿದ್ದು, ಈವರೆಗೆ ದೇಶದಲ್ಲಿ […]