ಇಕ್ವಿಡಾರ್‌ನಲ್ಲಿ ಪ್ರಬಲ ಭೂಕಂಪ, 15 ಮಂದಿ ಸಾವು

ಕ್ವಿಟೊ,ಮಾ.19- ದಕ್ಷಿಣ ಅಮೆರಿಕದ ಇಕ್ವಿಡಾರ್‍ನಲ್ಲಿ ಪ್ರಬಲ ಭೂಕಂಪ ಸಂಭವಿಸಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ 126ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಇಕ್ವಿಡಾರ್ ಮತ್ತು ಉತ್ತರ ಪೆರುವಿನ ಪ್ರದೇಶದಲ್ಲಿ ರಿಕ್ಟರ್ ಮಾಪನದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪನದಿಂದ ಕಟ್ಟಡಗಳು ಧರೆಗುರುಳಿವೆ. ಜನರು ಮನೆಬಿಟ್ಟು ಬೀದಿಗೆ ಬಂದಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸತತ ಕಾರ್ಯಾಚರಣೆ ನಡೆಸಿ ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೇಶದ ಕರಾವಳಿ ಗುವಾಯಸ್ […]

ಶಿಯಾ ಧರ್ಮಗುರು ರಾಜೀನಾಮೆ, ಇರಾಕಿನಲ್ಲಿ ಘರ್ಷಣೆ, 15 ಮಂದಿ ಸಾವು

ಬಾಗ್ದಾದ್, ಆ.30 -ಪ್ರಭಾವಿ ಶಿಯಾ ಧರ್ಮಗುರು ರಾಜಕೀಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರಿಂದ ಕೋಪಗೊಂಡ ನೂರಾರು ಅನುಯಾಯಿಗಳು ಸರ್ಕಾರಿ ಅರಮನೆಗೆ ನುಗ್ಗಲು ಮತ್ತು ಭದ್ರತಾ ಪಡೆಗಳೊಂದಿಗೆ ಘರ್ಷಣೆಯಲ್ಲಿ ತೊಡಗಿದ ಪರಿಣಾಮ ಸುಮಾರು 15 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ. ಧರ್ಮಗುರು ಮುಕ್ತಾದ ಅಲ್ -ಸದರ್ ಅವರಿಗೆ ನಿಷ್ಠರಾಗಿರುವ ಪ್ರತಿಭಟನಾಕಾರರು ಸರ್ಕಾರಿ ಅರಮನೆಯ ಹೊರಗಿನ ಸಿಮೆಂಟ್ ತಡೆಗೊಡೆಯನ್ನು ಒಡೆದುಹಾಕಿ ಹಗ್ಗಗಳಿಂದ ಎಳೆದು ಅರಮನೆಯ ದ್ವಾರಗಳನ್ನು ಮುರಿದರು. ಇರಾಕಿನ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ, ಇರಾಕ್ […]