ರಷ್ಯಾ : ಕೆಫೆಯೊಂದರಲ್ಲಿ ಅಗ್ನಿಅನಾಹುತ, 15 ಮಂದಿ ಸಾವು

ಮಾಸ್ಕೌ,ನ.5- ಜಗಳದ ನಡುವೆ ವ್ಯಕ್ತಿಯೊಬ್ಬರು ಫ್ಲೇರ್‍ಗನ್ ಬಳಸಿದ್ದರಿಂದ ರಷ್ಯಾದ ಕೆಫೆಯಲ್ಲಿ ಬೆಂಕಿ ಅನಾಹುತ ಸಂಭವಿಸಿ 15 ಮಂದಿ ಸಾವನ್ನಪ್ಪಿದ್ದಾರೆ. ರಷ್ಯಾದ ರಾಜಧಾನಿ ಮಾಸ್ಕೊದಿಂದ ಉತ್ತರಕ್ಕೆ 340 ಕಿ.ಮೀ ದೂರದಲ್ಲಿರುವ ಕೊಸ್ಟ್ರೊಡ್ರೊಮ ನಗರದಲ್ಲಿ ಈ ದುರಂತ ಸಂಭವಿಸಿದೆ. ವಿವಾದಕ್ಕೆ ಸಂಬಂಧಪಟ್ಟಂತೆ ಜಗಳ ನಡೆಯುವಾಗ ವ್ಯಕ್ತಿಯೊಬ್ಬರು ಫ್ಲೇರ್‍ಗನ್‍ನ್ನು ಬಳಸಿದ್ದಾರೆ. ಇದರಿಂದ ಕೆಫೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಬೆಂಕಿಯ ಕೆನ್ನಾಲಿಗೆ ಹತ್ತಿಕೊಂಡಿದೆ. ಪರಿಣಾಮ 15 ಮಂದಿ ಸಾವನ್ನಪ್ಪಿದ್ದಾರೆ. 250 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿಗಳನ್ನು […]