ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ : 15 ಲಕ್ಷ ಮೌಲ್ಯದ ಚಿನ್ನಾಭರಣ, 3 ಕಾರುಗಳ ಜಪ್ತಿ
ಬೆಂಗಳೂರು, ಸೆ.17- ಮನೆಯ ಬೀಗ ಮೀಟಿ ಒಳ ನುಗ್ಗಿ ಚಿನ್ನದ ಆಭರಣಗಳು, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಬಸವನ ಪುರ ಗ್ರಾಮದ ಮೊಹಮ್ಮದ್ ತೌಹಿದ್ ಅಲಿಯಾಸ್ ತೌಹಿದ್(20) ಬಂಧಿತ ಆರೋಪಿ.ಜೂನ್ 10ರಂದು ರಾತ್ರಿ ಎಂ.ಪಿ.ಎಂ. ಲೇಔಟ್‍ನ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್‍ನ ಮನೆಯೊಂದರ ಮುಂಭಾಗಿಲು ಬೀಗ ಮೀಟಿ ಚಿನ್ನದ […]