ಉತ್ತರ ಸಿರಿಯಾ ಮಾರುಕಟ್ಟೆಯಲ್ಲಿ ಸ್ಫೋಟ; 15 ಜನ ಬಲಿ

ಬೈರುತ್, ಆ.20- ಉತ್ತರ ಸಿರಿಯಾ ಪಟ್ಟಣದ ಜನನಿಬಿಡ ಮಾರುಕಟ್ಟೆಯ ಮೇಲೆ ಟರ್ಕಿ ಬೆಂಬಲಿತ ಹೋರಾಟಗಾರರು ರಾಕೆಟ್ ದಾಳಿ ನಡೆಸಿದ ಪರಿಣಾಮ 15 ಜನ ಬಲಿಯಾಗಿದ್ದು 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತ 15 ಮಂದಿಯಲ್ಲಿ ಮೂವರು ಮಕ್ಕಳು ಸೇರಿದ್ದಾರೆ ಗಾಯಗೊಂಡಿರುವವರಲ್ಲಿ ಹಲವರ ಸ್ಥತಿ ಚಿಂತಾಜನಕವಾಗಿದೆ.ಅರೆವೈದ್ಯಕೀಯ ಸದಸ್ಯರು ಕೆಲವು ಗಾಯಾಳುಗಳು ಮತ್ತು ಮೃತ ದೇಹಗಳನ್ನು ಸ್ಥಳಾಂತರಿಸಿದರು ಎಂದು ಮಾಧ್ಯಮಗಳು ವರದಿ ಮಾಡಿದೆ ಯುದ್ದ ಪೀಡಿತ ದೇಶದಲ್ಲಿಆರಾಜಕತೆ ಶುರುವಾಗಿದ್ದು, ಸಾವಿರಾರು ಜನರು ದೇಶ ತೊರೆಯುತ್ತಿದ್ದಾರೆ.