ಹಳೆಯ ವಾಹನ ಹೊಂದಿದವರಿಗೆ ಶಾಕಿಂಗ್ ನ್ಯೂಸ್, ಇಂದಿನಿಂದ ಗುಜರಿ ನೀತಿ ಜಾರಿ

ಬೆಂಗಳೂರು,ಆ.5- ಈಗಾಗಲೇ ಕೇಂದ್ರ ಸರ್ಕಾರ ಜಾರಿ ಮಾಡಿರುವ ಹಳೆ ವಾಹನಗಳನ್ನು ಗುಜರಿಗೆ ಹಾಕುವ ಸ್ಕ್ರ್ಯಾಪ್ ನೀತಿಯು ರಾಜ್ಯದಲ್ಲೂ ಜಾರಿಯಾಗಿದೆ. ರಾಜ್ಯ ಸರ್ಕಾರದ ಹೊಸ ನಿಯಮದಂತೆ ಇನ್ನು ಮುಂದೆ 15 ವರ್ಷ ಹಳೆಯದಾದ ವಾಹನವನ್ನು ಕಡ್ಡಾಯವಾಗಿ ಗುಜರಿಗೆ ಹಾಕುವುದು ಅನಿವಾರ್ಯವಾಗುತ್ತದೆ. 2023 ರಿಂದ, ಎಲ್ಲಾ ರೀತಿಯ ಭಾರಿ ವಾಣಿಜ್ಯ ವಾಹನಗಳು ಕಡ್ಡಾಯ ಫಿಟ್ನೆಸ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಅದೇ ಸಮಯದಲ್ಲಿ, ಈ ನೀತಿಯು ಜೂನ್ 2024ರಿಂದ ಖಾಸಗಿ ಮತ್ತು ಇತರ ವಾಹನಗಳ ಗುಂಪುಗಳಿಗೆ ಅನ್ವಯಿಸುತ್ತದೆ. ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಮೋಟಾರ್ […]