150 ದೇಶಗಳಿಗೆ ಕೊರೊನಾ ಲಸಿಕೆ ಸರಬರಾಜು ಮಾಡಿದ್ದೇವೆ ; ಮಾಂಡವಿಯಾ

ನವದೆಹಲಿ,ಮಾ.11-ಕೊರೊನಾ ಸಂದರ್ಭದಲ್ಲಿ ನಾವು 150 ದೇಶಗಳಿಗೆ ಅಗ್ಗದ ಬೆಲೆಗೆ ಲಸಿಕೆ ಸರಬರಾಜು ಮಾಡಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ದೆಹಲಿಯಲ್ಲಿ ಆರೋಗ್ಯ ತಂತ್ರಜ್ಞಾನ ಮೌಲ್ಯಮಾಪನ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತವು 150 ದೇಶಗಳಿಗೆ ಔಷಧಗಳನ್ನು ಬೆಲೆಯನ್ನು ಹೆಚ್ಚಿಸದೆ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಕಳುಹಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವರು ಹೇಳಿದರು. ವಿಶ್ವದ ಲಸಿಕೆ ಅಗತ್ಯತೆಯ ಶೇ.65ರಷ್ಟು ಭಾರತವನ್ನು ಪೂರೈಸುತ್ತದೆ ಎಂದು ಮಾಂಡವಿಯಾ […]