160ಕ್ಕೂ ಹೆಚ್ಚು ಮನೆಗಳ್ಳತನ ಮಾಡಿದ್ದ ಕುಖ್ಯಾತ ಕಳ್ಳ ವಶಕ್ಕೆ

ಬೆಂಗಳೂರು, ಆ.27- ಕರ್ನಾಟಕ, ಕೇರಳ, ಗೋವಾ ಸೇರಿದಂತೆ ಹಲವೆಡೆ 160ಕ್ಕೂ ಹೆಚ್ಚು ಮನೆಗಳ್ಳತನ, ಚಿನ್ನಾಭರಣ ಮಳಿಗೆಗಳಿಗೆ ಕನ್ನ ಹಾಕಿದ್ದ ಕುಖ್ಯಾತ ಕಳ್ಳನನ್ನು ರಾಜಾಜಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಸುಮಾರು 10 ಬಾರಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಗೆ ಬಂದಿರುವ ಈತ ಅಂತಾರಾಜ್ಯ ಮನೆಗಳ್ಳನಾಗಿದ್ದು, ಗೋವಾದಲ್ಲಿ ಜ್ಯುವೆಲರಿ ಅಂಗಡಿಯೊಂದಕ್ಕೆ ಕನ್ನ ಹಾಕಿ ಸುಮಾರು 7 ಕೆಜಿ ಚಿನ್ನವನ್ನು ದೋಚಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಸುಮಾರು 160ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ […]