ರಾಜ್ಯದಲ್ಲಿ 18.80 ಲಕ್ಷ ವಸತಿ ರಹಿತರು

ಬೆಳಗಾವಿ,ಡಿ.28- ರಾಜ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಸಮೀಕ್ಷೆಯ ಪ್ರಕಾರ 18.88,689 ವಸತಿ ರಹಿತರಿದ್ದಾರೆ ಎಂದು ವಸತಿ ಮತ್ತು ಮೂಲಸೌಲಭ್ಯಗಳ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ವಿಧಾನ ಪರಿಷತ್‍ನಲ್ಲಿ ಸದಸ್ಯ ಡಾ.ಡಿ.ತಿಮ್ಮಯ್ಯಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎರಡು ವರ್ಷಗಳಲ್ಲಿ 4900 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ ಶೇ.40ರಷ್ಟು ಪರಿಶಿಷ್ಟ ಸಮುದಾಯದ ಫಲಾನುಭವಿಗಳಿದ್ದಾರೆ ಎಂದರು. ಲಭ್ಯ ಇರುವ ಐದು ಸಾವಿರ ಎಕರೆ ಭೂಮಿಯನ್ನು ನಿವೇಶವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. 2018ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 18 ಲಕ್ಷ ನಿರ್ವಸತಿಗರಿದ್ದಾರೆ. ರಾಜೀವ್ […]