BIG NEWS : ವಾಣಿಜ್ಯ ಇಲಾಖೆಯ 18 ಅಧಿಕಾರಿಗಳ ಅಮಾನತು..!

ಬೆಂಗಳೂರು,ಡಿ.2-ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ವಾಣಿಜ್ಯ ಇಲಾಖೆಯ ಜಂಟಿ ಆಯುಕ್ತರು, ಮೂವರು ಸಹಾಯಕ ಆಯುಕ್ತರು ಸೇರಿದಂತೆ 18 ಅಧಿಕಾರಿಗಳನ್ನು ಏಕಕಾಲಕ್ಕೆ ಸೇವೆಯಿಂದ ಅಮಾನತುಗೊಳಿಸಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಅತಿಹೆಚ್ಚು ವರಮಾನ ತರುವ ವಾಣಿಜ್ಯ ಇಲಾಖೆಯ ಅಧಿಕಾರಿಗಳನ್ನು ಏಕಕಾಲಕ್ಕೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮಾನತು ಮಾಡಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಸವಿತಾ-ಜಂಟಿ ಆಯುಕ್ತರು, ಮೈಸೂರು, ಶ್ರೀರಂಗಪ್ಪ, ಸಹಾಯಕ ಆಯುಕ್ತ (ಎಸಿ), ಚಳ್ಳಕೆರೆ, ಕೇಶವಮೂರ್ತಿ-ಎಸಿ, ಮಡಿಕೇರಿ, ಉಮಾದೇವಿ-ಎಸಿ, ದೇವನಹಳ್ಳಿ, ಮೈಸೂರಿನ […]