ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿ 19 ಲಕ್ಷ ನಗದು, 500 ಗ್ರಾಂ ಚಿನ್ನ ದರೋಡೆ..

ಬೆಂಗಳೂರು, ಜ.1- ಪೊಲೀಸರೆಂದು ಹೇಳಿಕೊಂಡು ಬಂದಿದ್ದ ದರೋಡೆಕೋರರು ಮನೆಗೆ ನುಗ್ಗಿ 19 ಲಕ್ಷ ರೂ.ನಗದು, ಅರ್ಧ ಕೆಜಿ ಚಿನ್ನ ದೋಚಿದ್ದು, ಕುಟುಂಬದ ಸದಸ್ಯರನ್ನು ಅಪರಹಣ ಮಾಡಿ ಹಲವು ಕಡೆ ಸುತ್ತಾಡಿಸಿ, ಕೊನೆಗೆ ಜೀವ ಬೆದರಿಕೆ ಹಾಕಿರುವ ಘಟನೆ ವರ್ಷದ ಕೊನೆಯ ದಿನವೇ  ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಹಾಲಕ್ಷ್ಮೀಪುರಂ ಎರಡನೇ ಹಂತದಲ್ಲಿನ ಆದೀತ್ ಹೋಟೆಲ್ ಹಿಂಭಾಗದಲ್ಲಿ ವಾಸವಿರುವ ಸಿವಿಲ್ ಇಂಜಿನಿಯರ್ ಡಿ.ಸಾಮ್ಯಾನಾಯ್ಕ್ ಅವರು ನಿನ್ನೆ ರಾತ್ರಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. […]