ದೇಶದಾದ್ಯಂತ 24 ಗಂಟೆಯಲ್ಲಿ 19,336 ಮಂದಿಗೆ ಕೊರೋನಾ

ನವದೆಹಲಿ, ಜು.31- ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕೊಂಚ ಇಳಿಕೆಯಾಗಿದೆ. ನಿನ್ನೆ 20 ಸಾವಿರದಷ್ಟಿದ್ದ ಕೋವಿಡ್ ಪ್ರಕರಣಗಳು ಇಂದು 19 ಸಾವಿರಕ್ಕೆ ಇಳಿದಿವೆ. ಕಳೆದ 24 ಗಂಟೆಗಳಲ್ಲಿ 19,336 ಹೊಸ ಪ್ರಕರಣಗಳು ದಾಖಲಾಗಿದ್ದು, 45 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸದ್ಯಕ್ಕೆ ದೇಶದಲ್ಲಿ 1,43,676 ಸಕ್ರಿಯ ಪ್ರಕರಣಗಳಿದ್ದು, ಈವರೆಗೆ ಸೋಂಕಿನಿಂದ 4,33,49,778 ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಸಾವಿನ ಪ್ರಮಾಣ ಶೇ.1.2ರಷ್ಟಿದ್ದರೆ ಚೇತರಿಕೆ ದರ 98.48ರಷ್ಟಿದೆ.