ಅಪಾರ್ಟ್‍ಮೆಂಟ್‍ನ 19ನೇ ಮಹಡಿಯಿಂದ ಹಾರಿ ಮಹಿಳೆ ಆತ್ಮಹತ್ಯೆ

ಬೆಂಗಳೂರು, ಡಿ.25- ಅಪಾರ್ಟ್‍ಮೆಂಟ್‍ನ 19ನೇ ಮಹಡಿಯಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಲಘಟ್ಟ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇಂದು ಮಧ್ಯಾಹ್ನ ನಡೆದಿದೆ. ತಲಘಟ್ಟ ಪುರದ ಹಾಲಿಡೇ ವಿಲೇಜ್ ರಿಜಾರ್ಟ್ ರಸ್ತೆಯಲ್ಲಿರುವ ಪೂರ್ವ ಹೈಲ್ಯಾಂಡ್ ಅಪಾರ್ಟ್‍ಮೆಂಟ್‍ನಲ್ಲಿ ಚರಿಸ್ಮಾ ಸಿಂಗ್(40) ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ 1 ಗಂಟೆ ಸಂದರ್ಭದಲ್ಲಿ ಅಪಾರ್ಟ್‍ಮೆಂಟ್‍ನ 19 ನೇ ಮಹಡಿಯಿಂದ ಹಾರಿ ಇವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮಗ್ರ ಅಭಿವೃದ್ದಿಗಾಗಿ ಭಾರತದೊಂದಿಗೆ […]