ರೋಲಿಂಗ್ ಶೆಟರ್ ಮೀಟಿ 2 ಕೋಟಿ ಮೌಲ್ಯದ ವಾಚ್ ಕಳ್ಳತನ

ಬೆಂಗಳೂರು, ಜ.13- ಪ್ರತಿಷ್ಠಿತ ಶೋರೂಮ್‍ಗಳ ರೋಲಿಂಗ್ ಶೆಟರ್ ಮೀಟಿ ಒಳನುಗ್ಗಿ ಕಳ್ಳತನ ಮಾಡುತ್ತಿದ್ದ ಬಿಹಾರ ಮೂಲದ ಆರೋಪಿಯನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿ 2 ಕೋಟಿ ಮೌಲ್ಯದ 171 ಕೈಗಡಿಯಾರಗಳನ್ನು ವಶಪಡಿಸಿಕೊಂಡಿದ್ದಾರೆ. ಅಖ್ತರ್ ಬಂಧಿತ ಆರೋಪಿ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ತಲೆಮರೆಸಿಕೊಂಡಿದ್ದು, ಅವರ ಶೋಧ ಕಾರ್ಯ ಮುಂದುವರೆದಿದೆ. ಈ ಆರೋಪಿಗಳು ಬೆಳಗಿನ ಜಾವ ಮೊಬೈಲ್, ಕ್ಯಾಮೆರಾ, ಗಡಿಯಾರದ ಅಂಗಡಿಗಳನ್ನು ನೋಡಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ ಮಾಡಿದ ವಾಚುಗಳನ್ನು ಬಿಹಾರ ಹಾಗೂ ನೇಪಾಳ ಗಡಿಗಳಲ್ಲಿ […]