61 ಆರೋಪಿಗಳ ಬಂಧನ : 2 ಕೋಟಿ ಮಾಲು ವಶ

ಬೆಂಗಳೂರು,ಆ.17- ಉತ್ತರ ವಿಭಾಗದ ಪೊಲೀಸರು ಮಾದಕವಸ್ತು, ರಕ್ತ ಚಂದನ, ಸುಲಿಗೆ, ಸರಗಳ್ಳತನ, ಮೊಬೈಲ್ ಸುಲಿಗೆ, ಮನೆ ಕಳವು, ಸೇವಕರಿಂದ, ವಾಹನ ಕಳವು ಪ್ರಕರಣ ಗಳಲ್ಲಿ ಭಾಗಿಯಾಗಿದ್ದ 61 ಮಂದಿ ಆರೋಪಿ ಗಳನ್ನು ಬಂಧಿಸಿ 89 ಪ್ರಕರಣಗಳನ್ನು ಪತ್ತೆ ಹಚ್ಚಿ, ಸುಮಾರು 2.40 ಕೋಟಿ ರೂ. ಬೆಲೆ ಬಾಳುವ ಕಳವು ಮಾಲುಗಳನ್ನು ವಶಪಡಿಸಿಕೊಂಡಿದ್ದಾರೆ. 92 ಲಕ್ಷ ರೂ. ಮೌಲ್ಯದ ಮಾದಕವಸ್ತು ಚರ್ರಸ್ 1.9 ಕೆಜಿ, ಎಂಡಿಎಂಎ 662 ಗ್ರಾಂ, ಗಾಂಜಾ 27.960 ಕೆಜಿ ವಶಪಡಿಸಿಕೊಳ್ಳಲಾಗಿದೆ. 35 ಲಕ್ಷ ರೂ. […]

ಸಹಕಾರ ಮಂಡಳದಿಂದ ಶಿಕ್ಷಣ ನಿಧಿಗೆ 2 ಕೋಟಿ ರೂ. ಚೆಕ್ ಹಸ್ತಾಂತರ

ಬೆಂಗಳೂರು,ಆ.16- ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ವತಿಯಿಂದ 2 ಕೋಟಿ ರೂ. ಮೊತ್ತದ ಶಿಕ್ಷಣ ನಿಧಿಯ ಚೆಕ್‍ನ್ನು ರಾಜ್ಯ ಸಹಕಾರ ಮಹಾಮಂಡಳಕ್ಕೆ ಹಸ್ತಾಂತರಿಸಲಾಯಿತು. ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸಮ್ಮುಖದಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರಕುಮಾರ್ ಅವರು, ಸಹಕಾರ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಅವರಿಗೆ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ಜಿ.ಟಿ.ದೇವೇಗೌಡರು, ಭಿನ್ನಾಭಿಪ್ರಾಯ ರಾಜಕೀಯವನ್ನು ಬಿಟ್ಟು, ಸಹಕಾರ ಕ್ಷೇತ್ರ ಉಳಿಸುವ ಕೆಲಸವನ್ನು ಮಾಡಬೇಕು. ಸಹಕಾರ ಕ್ಷೇತ್ರವನ್ನು ಮೆಟ್ಟಿಲಾಗಿ ಬಳಸಿಕೊಂಡು ರಾಜಕೀಯಕ್ಕೆ ಬರುತ್ತಾರೆ. ಶಾಸಕರು, […]