ಬಂಧನದಲ್ಲಿಟ್ಟುಕೊಂಡಿದ್ದ ಇಬ್ಬರು ಪತ್ರಕರ್ತರನ್ನು ಬಿಡುಗಡೆ ಮಾಡಿದ ತಾಲಿಬಾನಿಗಳು
ಕಾಬೂಲ್, ಫೆ.12- ಸಂಯುಕ್ತ ರಾಷ್ಟ್ರಗಳ ನಿರಾಶ್ರೀತರ ಉನ್ನತ ಆಯುಕ್ತಾಲಯ (ಯುಎನ್‍ಎಚ್‍ಸಿಆರ್) ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪತ್ರಕರ್ತರನ್ನು ತಾಲಿಬಾನಿಗಳು ಬಿಡುಗಡೆ ಮಾಡಿದ್ದಾರೆ. ಆಫ್ಘಾನಿಸ್ತಾನದಲ್ಲಿ ಅಮೆರಿಕಾ ನಿರಾಶ್ರೀತರಿಗಾಗಿ ಕೆಲಸ ಮಾಡಲು ಜಿನಿವಾ ಮೂಲದ ಯುಎನ್‍ಎಚ್‍ಸಿಆರ್ ಸಹಯೋಗದಲ್ಲಿ ಇಬ್ಬರು ಪತ್ರಕರ್ತರು ತೆರಳಿದ್ದರು. ಅವರನ್ನು ಮತ್ತು ಅವರ ಜೊತೆ ಕೆಲಸ ಮಾಡುತ್ತಿದ್ದ ಸ್ಥಳೀಯ ಪ್ರಜೆಗಳನ್ನು ತಾಲಿಬಾನಿಗಳು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಬ್ರಿಟಿಷ್ ಬ್ರಾಡ್‍ಕಾಸ್ಟಿಂಗ್‍ನ ಮಾಜಿ ಪತ್ರಕರ್ತ ಆಂಡ್ರ್ಯೋ ನಾರ್ಥ್ ಸೇರಿದಂತೆ ಇಬ್ಬರ ಬಂಧನಕ್ಕೆ ಅಂತರರಾಷ್ಟ್ರೀಮ ಮಟ್ಟದಲ್ಲಿ ಅಸಹನೆ ಮತ್ತು ಕಳವಳಗಳು ವ್ಯಕ್ತವಾಗಿದ್ದವು. […]