ಕೋವಿಡ್ ಚಿಕಿತ್ಸೆಗೆ ಮತ್ತೆರಡು ಔಷಧಿಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ಅಂಗೀಕಾರ

ಪ್ಯಾರಿಸ್, ಜ.14- ವಿಶ್ವಾದ್ಯಂತ ರೂಪಾಂತರಿ ಓಮಿಕ್ರಾನ್ ಮತ್ತು ಕೋವಿಡ್ ಸೋಂಕು ತೀವ್ರಗೊಳ್ಳುತ್ತಿರುವ ನಡುವೆಗೆ ಸಮಾಧಾನಕರ ವಿಷಯವೊಂದು ಹೊರ ಬಿದ್ದಿದೆ. ವಿಶ್ವ ಆರೋಗ್ಯ ಸಂಸ್ಥೆ ಹೊಸದಾಗಿ ಎರಡು ಚಿಕಿತ್ಸಾ ಔಷಧಿಗಳಿಗೆ ಅನುಮೋದನೆ ನೀಡಿದೆ. ಈ ಮೂಲಕ ಕೋವಿಡ್ ವಿರುದ್ಧದ ಹೋರಾಟಕ್ಕೆ ಲಸಿಕೆಯ ಜೊತೆಗೆ ಎರಡು ಹೊಸ ಶಸ್ತ್ರಾಸ್ತ್ರಗಳು ಲಭ್ಯವಾದಂತಾಗಿದೆ. ಮುಂದಿನ ಮಾರ್ಚ್ ವೇಳೆಗೆ ಯೂರೋಪ್‍ನ ಅರ್ಧ ಭಾಗವನ್ನು ರೂಪಾಂತರಿ ಓಮಿಕ್ರಾನ್ ಆವರಿಸಿಕೊಳ್ಳಲಿದೆ ಎಂಬ ಅಂದಾಜಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಹೊಸ ಔಷಧಿಗಳನ್ನು ಶಸ್ತ್ರಾಗಾರಕ್ಕೆ ಸೇರಿಸಲಾಗಿದೆ. ಬ್ರಿಟಿಷ್ ಮೆಡಿಕಲ್ ಜನರಲ್ (ಬಿಎಂಜೆ) […]