ಶಸ್ತ್ರಸಜ್ಜಿತ ಬ್ಯಾಂಕ್ ದರೋಡೆಕೋರರನ್ನು ಹಿಮ್ಮೆಟ್ಟಿಸಿದ ಮಹಿಳಾ ಪೊಲೀಸರು

ಪಾಟ್ನಾ,ಜ.19-ಬ್ಯಾಂಕ್ ದರೋಡೆ ಮಾಡಲು ಬಂದ ಶಸ್ತ್ರ ಸಜ್ಜಿತ ದರೋಡೆಕೋರರೊಂದಿಗೆ ಹೋರಾಡಿ ಅವರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಗಿರುವ ಬಿಹಾರದ ಇಬ್ಬರು ಮಹಿಳಾ ಕಾನ್ಸ್‍ಟೆಬಲ್ ಧೈರ್ಯಕ್ಕೆ ದೇಶದೆಲ್ಲೆಡೆ ಶಹಬ್ಬಾಸ್‍ಗಿರಿ ವ್ಯಕ್ತವಾಗಿದೆ. ಉತ್ತರ ಬಿಹಾರ ಗ್ರಾಮೀಣ ಬ್ಯಾಂಕ್‍ನ ಭದ್ರತಾ ಸಿಬ್ಬಂದಿಗಳಾದ ಜೂಹಿ ಕುಮಾರಿ ಹಾಗೂ ಶಾಂತಿಕುಮಾರಿ ಅವರುಗಳೇ ದರೋಡೆಕೋರರನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದ ಧೈರ್ಯಶಾಲಿ ಮಹಿಳಾ ಪೊಲೀಸ್ ಸಿಬ್ಬಂದಿಗಳು. ನಿನ್ನೆ ಬ್ಯಾಂಕ್‍ಗೆ ಮೂವರು ಶಸ್ತ್ರಸಜ್ಜಿತ ದರೋಡೆಕೋರರು ಬಲವಂತವಾಗಿ ನುಗ್ಗಲು ಪ್ರಯತ್ನಿಸಿದಾಗ ಅವರನ್ನು ತಡೆದ ಜೂಹಿ ಹಾಗೂ ಶಾಂತಿ ಬ್ಯಾಂಕ್ ಪಾಸ್‍ಬುಕ್ ತೋರಿಸುವಂತೆ ಪಟ್ಟು ಹಿಡಿದರು. […]