ಮರದ ಕೊಂಬೆ ಬಿದ್ದು 2 ವರ್ಷದಿಂದ ಕೋಮಾದಲ್ಲಿದ್ದ ಬಾಲಕಿ ರಿಚೆಲ್ ಸಾವು

ಬೆಂಗಳೂರು,ಫೆ.10- ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ ಒಣ ಮರದ ಕೊಂಬೆ ಬಿದ್ದು ತೀವ್ರವಾಗಿ ಗಾಯಗೊಂಡು ಕಳೆದ ಎರಡು ವರ್ಷಗಳಿಂದ ಕೋಮದಲ್ಲಿದ್ದ ರಿಚೆಲ್ ಪ್ರಿಶಾ(10) ಬಾಲಕಿ ಕೊನೆಗೂ ಬದುಕುಳಿಯಲಿಲ್ಲ. ತನ್ನದಲ್ಲದ ತಪ್ಪಿಗೆ ಗಂಭೀರವಾಗಿ ಗಾಯಗೊಂಡು ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬಾಲಕಿ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ತಂದೆ ಜೊತೆ ಬೈಕ್‍ನಲ್ಲಿ ತೆರಳುತ್ತಿದ್ದಾಗ 2020 ಮಾರ್ಚ್ 11ನೇ ತಾರೀಖು ಬೆಳಗ್ಗೆ 8.45ರಲ್ಲಿ ರಾಮಮೂರ್ತಿನಗರದ ಕೌಡಲಹಳ್ಳಿ ಸಮೀಪ ಒಣಮರದ ಕೊಂಬೆ ಬಿದ್ದು ಈಕೆ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಖಾಸಗಿ ಆಸ್ಪತ್ರೆಗೆ […]