ಭಾರತದಲ್ಲಿ ಕೊರೊನಾ ಕೇಕೆ, 24 ಗಂಟೆಯಲ್ಲಿ 2,82,970 ಕೇಸ್, 441 ಸಾವು..!

ನವದೆಹಲಿ, ಜ.19- ಕಳೆದ 24 ಗಂಟೆಗಳಲ್ಲಿ 2,82,970 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಕೋವಿಡ್-19 ಪ್ರಕರಣಗಳ ಸಂಖ್ಯೆ 3,79,01,241ಕ್ಕೇರಿದೆ. ಇವುಗಳ ಪೈಕಿ 8961 ಓಮಿಕ್ರಾನ್ ರೂಪಾಂತರಿಯ ಪ್ರಕರಣಗಳಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 18,31,000ಕ್ಕೆ ಹೆಚ್ಚಳಗೊಂಡಿದೆ. ಇದು ಕಳೆದ 232 ದಿನಗಳಲ್ಲೇ ಅತ್ಯಕ ಪ್ರಮಾಣವಾಗಿದೆ. ಕಳೆದ ವರ್ಷದ ಮೇ 31ರಂದು 18,95,520 ಸಕ್ರಿಯ ಪ್ರಕರಣಗಳಿದ್ದವು. ನಿನ್ನೆ ಒಂದೇ ದಿನದಲ್ಲಿ 441 ಜನರು ಕೊರೊನಾದಿಂದ ಮೃತಪಟ್ಟಿದ್ದು, ಒಟ್ಟಾರೆ ಕೋವಿಡ್ […]