ಕೆಂಪುಕೋಟೆ ಮೇಲೆ ದಾಳಿ ಪ್ರಕರಣ : ಎಲ್‍ಇಟಿ ಉಗ್ರನ ಮರಣದಂಡನೆ ಎತ್ತಿಹಿಡಿದ ಸುಪ್ರೀಂ

ನವದೆಹಲಿ, ನ.3- ದೆಹಲಿಯ ಕೆಂಪುಕೋಟೆಯ ಮೇಲೆ ದಾಳಿ ನಡೆಸಿ ಮೂರು ಮಂದಿಯ ಹತ್ಯೆಗೆ ಕಾರಣವಾಗಿದ್ದ ಪ್ರಕರಣದಲ್ಲಿ ಲಸ್ಕರ್-ಇ-ತೋಯ್ಬಾ (ಎಲ್‍ಇಟಿ) ಸಂಘಟನೆಯ ಉಗ್ರಗಾಮಿ ಮೊಹಮ್ಮದ್ ಆರಿಫ್ ಅಲಿಯಾಸ್ ಅಷಕ್‍ಗೆ ವಿಸಲಾಗಿರುವ ಮರಣ ದಂಡನೆಯನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಘೋಷಿತ ಅಪರಾಧಿ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‍ನ ಮುಖ್ಯನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್, ನ್ಯಾಯಮೂರ್ತಿಗಳಾದ ಬೇಲ ಎಂ.ತ್ರಿವೇದಿ ಅವರನ್ನೊಳಗೊಂಡ ಸಂಯುಕ್ತ ಪೀಠ ತಿರಸ್ಕರಿಸಿದೆ. ಕಳೆದ 2000ನೆ ಸಾಲಿನಲ್ಲಿ ದೆಹಲಿಯ ಕೆಂಪು ಕೋಟೆ ಮೇಲೆ ಉಗ್ರದಾಳಿ ನಡೆದಿತ್ತು. ಆ ಘಟನೆಯಲ್ಲಿ […]