ದೇಶದಲ್ಲಿ ಒಂದೇ ದಿನ 20 ಸಾವಿರ ದಾಟಿದ ಕರೋನಾ ಸೋಂಕಿತರ ಸಂಖ್ಯೆ

ನವದೆಹಲಿ, ಜುಲೈ 14 -ಭಾರತದಲ್ಲಿ ಕಳೆದ 24 ತಾಸಿನಲ್ಲಿ 20,000 ಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗಿದ್ದು, 38 ಮಂದಿ ಅಸುನೀಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ದೈನಂದಿನ ಕೋವಿಡ ಪ್ರಕರಣಗಳು 145 ದಿನಗಳ ಅಂತರದ ನಂತರ 20,000 ಕ್ಕಿಂತ ಹೆಚ್ಚು ದಾಖಲಾಗಿವೆ ಮತ್ತು ಸಕ್ರಿಯ ಪ್ರಕರಣಗಳು 1,36,076 ಕ್ಕೆ ಏರಿದೆ. ಒಂದೇ ದಿನ ಒಟ್ಟು 20,139 ಜನರಿಗೆ ಕರೋನಾ ಪತ್ತೆ ವರದಿಯಾಗಿದ್ದು, ಇದುವರೆಗೆ ಸೋಂಕಿಗೆ ಒಳಗಾದವರು ಒಟ್ಟು ಸಂಖ್ಯೆ 4,36,89,989 […]