ರಾಜ್ಯದಲ್ಲಿ ಮತ್ತೆ ಅಧಿಕಾರ ಹಿಡಿಯಲು ‘ಯುಪಿ ಮಾಡೆಲ್’ ಮೊರೆಹೋದ ಬಿಜೆಪಿ

ಬೆಂಗಳೂರು, ಸೆ.1- ಶತಾಯ-ಗತಾಯ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲೇಬೇಕೆಂದು ಪಣ ತೊಟ್ಟಿರುವ ಆಡಳಿತರೂಢ ಬಿಜೆಪಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ಮಾದರಿಯನ್ನು ಅನುಸರಿಸಲು ಮುಂದಾಗಿದೆ. ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ಬಿಜೆಪಿ ಬಿಜೆಪಿ ಕೇವಲ ನಿರ್ದಿಷ್ಟ ಜಾತಿಯ ಮತಗಳಿಗೆ ಸೀಮಿತವಾಗದೆ ಸಣ್ಣಪುಟ್ಟ ಸಮುದಾಯಗಳನ್ನು ಓಲೈಸಿಕೊಂಡಿತ್ತು. ಇದರ ಪರಿಣಾಮವೇ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗಿ ಮಾಡಿ ಕಮಲ ಎರಡನೇ ಬಾರಿಗೆ ಸ್ಪಷ್ಟ ಜನಾದೇಶ ಪಡೆದು ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಇದೀಗ ಇದೇ ತಂತ್ರವನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿ […]

2023ರಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೆ : ಕಟೀಲ್ ಭವಿಷ್ಯ

ದೇವನಹಳ್ಳಿ, ಜು. 25- ಕಾಂಗ್ರೆಸ್ ಸರ್ಕಾರದ ಅವಯಲ್ಲಿ ಲೋಕಾಯುಕ್ತದ ಹಲ್ಲು ಕಿತ್ತಿದ್ದು ಇದೇ ಸಿದ್ದರಾಮಣ್ಣ. ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಜೈಲಿಗೆ ಹೋಗುತ್ತಿದ್ದರು. ಇದೆಲ್ಲ ಅವರಿಗೆ ಗೊತ್ತಿತ್ತು. ಬಿಜೆಪಿ ಇಂತಹ ಕೆಲಸ ಮಾಡಲ್ಲ. ನಾವು ದ್ವೇಷದ ರಾಜಕಾರಣ ಮಾಡಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ದೊಡ್ಡಬಳ್ಳಾಪುರಕ್ಕೆ ಹೋಗುವ ವೇಳೆ ಪ್ರವಾಸಿಮಂದಿರಕ್ಕೆ ಬಂದಿದ್ದ ಸಂದರ್ಭದಲ್ಲಿ ಕಾರ್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿಗೆ ಸ್ವಾತಂತ್ರ್ಯ ಶಕ್ತಿಯನ್ನು ಎಸಿಬಿಗೂ ಸ್ವಾತಂತ್ರ್ಯ ಶಕ್ತಿಯನ್ನು ಬಿಜೆಪಿ ಕೊಟ್ಟಿದೆ. ಅವರು […]

ಮುಂಬರುವ ಚುನಾವಣೆಯಲ್ಲಿ ಹೊಸಬರಿಗೆ ಚಾನ್ಸ್, ಬಿಜೆಪಿ ಶಾಸಕರಿಗೆ ಶುರುವಾಗಿದೆ ಆತಂಕ

ಬೆಂಗಳೂರು,ಜು.25- ಕರ್ನಾಟಕದಲ್ಲಿ ಮುಂದಿನ ವರ್ಷ ಎದುರಾಗಲಿರುವ ವಿಧಾನಸಭೆ ಚುನಾವಣೆಗೆ ಹೊಸ ಮುಖಗಳಿಗೆ ಆದ್ಯತೆ ನೀಡಲು ಕೇಂದ್ರ ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದು, ರಾಜ್ಯ ಬಿಜೆಪಿ ಶಾಸಕರಿಗೆ ಅದಾಗಲೇ ಆತಂಕ ಶುರುವಾಗಿದೆ. ಉತ್ತರ ಪ್ರದೇಶದಲ್ಲಿ ಹೊಸ ನಾಯಕರಿಗೆ ಮನ್ನಣೆ ನೀಡಿದ ರೀತಿಯಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕನಿಷ್ಠ 40ರಿಂದ 50 ಕ್ಷೇತ್ರಗಳಲ್ಲಿ ಹೊಸಬರಿಗೆ ಆದ್ಯತೆ ನೀಡಲಿದ್ದು, ಒಂದು ಕ್ಷೇತ್ರದಲ್ಲಿ ಮೂರು ಬಾರಿ ಗೆದ್ದ ನಾಯಕರಿಗೆ ಹೊಸ ಕ್ಷೇತ್ರ ಆಯ್ಕೆಗೆ ಸೂಚನೆ ನೀಡಲು ಚಿಂತನೆ ನಡೆದಿದೆ. ಉತ್ತರಪ್ರದೇಶದಲ್ಲಿ […]

ಜೆಡಿಎಸ್ ಪುನರ್ ಸಂಘಟನೆಗೆ ಆದ್ಯತೆ

ಬೆಂಗಳೂರು, ಜ.19- ಪಕ್ಷ ಪುನರ್ ಸಂಘಟನೆಗೆ ಒತ್ತು ನೀಡಿರುವ ಜೆಡಿಎಸ್ ನಾಯಕರು ವಿಸಿಟಿಂಗ್ ಕಾರ್ಡ್ ಶೂರರಿಗೆ ಗೇಟ್‍ಪಾಸ್ ನೀಡಲು ಉದ್ದೇಶಿಸಿದ್ದಾರೆ. ಮುಂಬರುವ 2023ರ ವಿಧಾನಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಸಮಗ್ರವಾಗಿ ಬಲಗೊಳಿಸಲು ಕಾರ್ಯಪ್ರವೃತ್ತರಾಗಿದ್ದು, ಆ ನಿಟ್ಟಿನಲ್ಲಿ ಪಕ್ಷವನ್ನು ಪುನರ್ ಸಂಘಟಿಸಲು ಮುಂದಾಗಿದ್ದಾರೆ. ಸ್ವಂತ ಶಕ್ತಿ ಮೇಲೆ ಪಕ್ಷವನ್ನು ಅಕಾರಕ್ಕೆ ತರಲೇಬೇಕೆಂದು ಪಣ ತೊಟ್ಟಿರುವ ನಾಯಕರು ಆಂತರಿಕವಾಗಿ ಪಕ್ಷದಲ್ಲಿ ಮಹತ್ತರ ಬದಲಾವಣೆ ತರಲು ಚಾಲನೆ ನೀಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ. ಪಕ್ಷದಲ್ಲಿನ ವಿವಿಧ ಹುದ್ದೆ, ಸ್ಥಾನಮಾನ ಹೊಂದಿ […]