ರಾಜ್ಯಾದ್ಯಂತ 7 ಬೃಹತ್ ಸಮಾವೇಶಕ್ಕೆ ಬಿಜೆಪಿ ಸಿದ್ಧತೆ

ಬೆಂಗಳೂರು,ಸೆ.29- 2023ರ ವಿಧಾನಸಭಾ ಚುನಾವಣೆಗೆ ಸಿದ್ದತೆ ಆರಂಭಿಸಿರುವ ಬಿಜೆಪಿ ಮುಂದಿನ ಮೂರು ತಿಂಗಳ ಆಕ್ಷನ್ ಪ್ಲಾನ್ ಸಿದ್ಧಪಡಿಸಿಕೊಂಡಿದೆ. ವರ್ಷಾಂತ್ಯದೊಳಗೆ ಆಯ್ದ 104 ವಿಧಾನಸಭಾ ಕ್ಷೇತ್ರ ಪ್ರವಾಸ ಮತ್ತು 7 ಬೃಹತ್ ಸಮಾವೇಶಗಳನ್ನು ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವರ್ಚಸ್ಸು ಹೊಂದಿರುವ ನಾಯಕರನ್ನು ಕರೆತರಲು ಹೈಕಮಾಂಡ್ ನಿರ್ಧರಿಸಿದೆ. 150 ಕ್ಷೇತ್ರ ಗೆಲುವಿನ ಗುರಿ ಮುಟ್ಟುವ ಕಾರ್ಯಸಿದ್ಧತೆ ಮಾಡಿಕೊಂಡಿದ್ದು, ರಾಜ್ಯದಲ್ಲಿ ಕೇಸರಿ ಹವಾ ಸೃಷ್ಟಿಸಲು ಮುಂದಾಗಿದೆ.ಇದಕ್ಕಾಗಿ ಮೂರು ತಿಂಗಳ ಕಾರ್ಯಯೋಜನೆಯನ್ನು ರಚಿಸಿಕೊಂಡಿದೆ. ಪಕ್ಷಕ್ಕೆ ನೆಲೆ ಇಲ್ಲದ ದೊಡ್ಡಬಳ್ಳಾಪುರದಲ್ಲಿ ನಡೆಸಿದ ಜನೋತ್ಸವ ಸಮಾರಂಭಕ್ಕೆ […]