2024ರ ಅಮೆರಿಕ ಅಧ್ಯಕ್ಷೀಯ ಚುನಾವನೆಯಲ್ಲಿ ಟ್ರಂಪ್ ಸ್ಪರ್ಧೆ

ವಾಷಿಂಗ್ಟನ್,ನ.16-ಮುಂದಿನ 2024ರ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ರ್ಪಧಿಸುವುದಾಗಿ ಡೊನಾಲ್ಡ ಟ್ರಂಪ್ ಘೋಷಿಸಿದ್ದಾರೆ. ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ಮತ್ತು ವೈಭವಯುತ ಮಾಡಲು,ಯಾರೂ ಎದುರಾಳಿಗಳಿಲ್ಲದಂತೆ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಡೆಮಾಕ್ರಟಿಕ್ ಪಕ್ಷವನ್ನು ಸೋಲಿಸುವ ಗುರಿ ಹೊಂದಿರುವುದಾಗಿ ಫ್ಲೋರಿಡಾದಲ್ಲಿ ಸುಮಾರು 400 ಆಹ್ವಾನಿತ ಅತಿಥಿಗಳ ಮುಂದೆ ಘೋಷಿಸಿದರು. ಘೋಷಣೆ ಮಾಡುವ ಮೊದಲು ಟ್ರಂಪ್ ಅವರು, ಫೆಡರಲ್ ಚುನಾವಣಾ ಆಯೋಗಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿದ್ದರು ಎಂದು ಬೆಂಬಲಿಗರು ತಿಳಿಸಿದ್ದಾರೆ. ಅಮೆರಿಕ ಜನತೆ ನಿಜವಾದ ವೈಭವವನ್ನು ಜಗತ್ತು ಇನ್ನೂ ನೋಡಿಲ್ಲ . ನಾವು […]

ಸೋಮವಾರ ಕಾಂಗ್ರೆಸ್ ಕಾರ್ಯಪಡೆಯೊಂದಿಗೆ ಖರ್ಗೆ ಮೊದಲ ಸಭೆ

ನವದೆಹಲಿ,ನ.12- ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಪಡೆ ಸಭೆ ನಡೆಸಲಿದ್ದಾರೆ. ಮುಂಬರುವ 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ರಚಿಸಲಾಗಿರುವ ಕಾಂಗ್ರೆಸ್ ಕಾರ್ಯಪಡೆ ಸದಸ್ಯರೊಂದಿಗೆ ಸೋಮವಾರ ಖರ್ಗೆ ಅವರು ಸಭೆ ನಡೆಸಲು ತೀರ್ಮಾನಿಸಿದ್ದಾರೆ. ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಯಪಡೆಯ ಮೊದಲ ಸಭೆ ಇದಾಗಿದೆ. ಕಾರ್ಯಪಡೆಯ ಸದಸ್ಯರು 2024ರ ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ರೂಪಿಸಲಾಗಿರುವ ಕಾರ್ಯತಂತ್ರಗಳ ಬಗ್ಗೆ ಖರ್ಗೆ ಅವರಿಗೆ ವಿವರಿಸಲಿದ್ದಾರೆ. ನಡುರಸ್ತೆಯಲ್ಲಿ […]

ಮುಂದಿನ ಚುನಾವಣೆಯಲ್ಲಿ ಬಿಜೆಪಿ 50 ಸ್ಥಾನಕ್ಕೆ ಕುಸಿಯಲಿದೆ : ನಿತೀಶ್‍ ಕುಮಾರ್

ಪಾಟ್ನಾ,ಸೆ.4-ಪ್ರತಿಪಕ್ಷಗಳ ಒಗ್ಗಟ್ಟಿನಿಂದಾಗಿ ಬಿಜೆಪಿಯನ್ನು ಅಧಿಕಾರದಿಂದ ಹೊರದಬ್ಬುವ ಅಭಿಯಾನ ಯಶಸ್ವಿಯಾಗಲಿದ್ದು, 2024ರ ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷ 50 ಸ್ಥಾನಗಳಿಗೆ ಕುಸಿಯಲಿದೆ ಎಂದು ಬಿಹಾರ ಮಾಜಿ ಮುಖ್ಯಮಂತ್ರಿ ನಿತೀಶ್‍ಕುಮಾರ್ ಹೇಳಿದ್ದಾರೆ. ಪಾಟ್ನಾದಲ್ಲಿ ನಡೆಯುತ್ತಿರುವ ಜೆಡಿಯುನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳಲ್ಲಿನ ಒಗ್ಗಟ್ಟಿನ ಹೋರಾಟದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ. ಈ ಅಭಿಯಾನವನ್ನು ಮುನ್ನಡೆಸಲು ನಾನು ಸ್ವಯಂ ಸಿದ್ದನಿದ್ದೇನೆ. ಒಂದು ವೇಳೆ ನಾವು ನಿರೀಕ್ಷೆಯಂತೆ ಕೆಲಸ ಮಾಡಿದರೆ ಬಿಜೆಪಿ 50ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲಲಾರದು ಎಂದಿದ್ದಾರೆ. ಎಲ್ಲಾ […]

ಮೋದಿ ಸಾರಥ್ಯದಲ್ಲೇ 2024ರ ಲೋಕಸಭಾ ಚುನಾವಣೆ : ಅಮಿತ್‍ಷಾ

ಪಾಟ್ನ, ಆ.1- ಮುಂದಿನ 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಸಾರಥ್ಯದಲ್ಲೇ ಎದುರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್‍ಷಾ ಹೇಳಿದ್ದಾರೆ. ಎನ್‍ಡಿಯಲ್ಲಿರುವ ಮಿತ್ರ ಪಕ್ಷಗಳು ಹಾಗೂ ಬಿಹಾರದಲ್ಲಿ ನಮ್ಮ ಮಿತ್ರರಾಗಿರುವ ಜೆಡಿಯು ನಮ್ಮೊಂದಿಗೇ ಇರುತ್ತಾರೆ ಎಂದು ಇಲ್ಲಿ ನಡೆದ ಜಂಟಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಸುದ್ದಿಗಾರರೊಂದಿಗೆ ಅಮಿತ್ ಷಾತಿಳಿಸಿದ್ದಾರೆ. ಮೂರನೇ ಬಾರಿಗೂ ಮೋದಿ ಅವರು ಪ್ರಧಾನಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿರುವ ಅವರು ಕಳೆದ ಭಾರಿಗಿಂತ ಹೆಚ್ಚಿನ ಸ್ಥಾನವನ್ನು ಗೆಲ್ಲಲು ಪಕ್ಷದ ಕಾರ್ಯಕರ್ತರು […]