ವಾಹನಗಳಿಗೆ ಪ್ಯಾನಿಕ್ ಬಟನ್ ಅಳವಡಿಕೆ ಯೋಜನೆಗೆ 21 ಕೋಟಿ ರೂ. ಮಂಜೂರು

ಬೆಂಗಳೂರು, ನ.15- ಮಹಿಳೆಯರು ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯುಳ್ಳ ಸಾರ್ವಜನಿಕ ಸೇವಾ ವಾಹನಗಳಿಗೆವಾಹನದ ಸ್ಥಳ ಟ್ರ್ಯಾಕಿಂಗ್ ಸಾಧನ (ವಿಎಲ್‍ಟಿಡಿ)ಮತ್ತು ತುರ್ತು ಪ್ಯಾನಿಕ್ ಬಟನ್ (ಇಪಿಬಿ) ಅಳವಡಿಕೆ ಯೋಜನೆಗೆ ರಾಜ್ಯ ಸರ್ಕಾರವು 21, 22,30, 649 ರೂ.ಗಳನ್ನು ಸರ್ಕಾರ ಮಂಜೂರು ಮಾಡಿದೆ. ಈ ಯೋಜನೆಯ ಎರಡು ವರ್ಷಗಳ ನಿರ್ವಹಣಾ ವೆಚ್ಚ ಒಳಗೊಂಡಂತೆ ಮೇಲಿನ ಮೊತ್ತಕ್ಕೆ ಸಾರಿಗೆ ಇಲಾಖೆಯು ಆಡಳಿತಾತ್ಮಕ ಒಪ್ಪಿಗೆ ನೀಡಿ ಆದೇಶ ಹೊರಡಿಸಿದೆ. ಇದರಲ್ಲಿ ಕೇಂದ್ರ ಸರ್ಕಾರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40ರಷ್ಟು ವೆಚ್ಚ ಭರಿಸಲಿವೆ. […]