ರೌಡಿಗಳಿಗೆ ಖಾಕಿ ಚಾಟಿ : ಗೂಂಡಾ ಕಾಯ್ದೆಯಡಿ 23 ಮಂದಿ ಬಂಧನ, 13 ಮಂದಿ ಗಡಿಪಾರು

ಬೆಂಗಳೂರು, ಜ.4- ನಗರದಲ್ಲಿ ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲಾಗಿದ್ದು, ಕಳೆದ 2022ನೇ ಸಾಲಿನಲ್ಲಿ 22 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 40 ರೌಡಿಗಳ ವಿರುದ್ಧ ಬಾಂಡ್‍ಗಳ ಮೊತ್ತಕ್ಕೆ ಮುಟ್ಟುಗೋಲು ಹಾಕಿಕೊಂಡಿದ್ದು, 13 ಮಂದಿಯನ್ನು ಗಡಿ ಪಾರು ಮಾಡಲಾಗಿದೆ. ಭದ್ರತಾ ಕಾಯ್ದೆಯಡಿ ಒಟ್ಟು 3100 ಮಂದಿ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಷ ರತ್ತು ಉಲ್ಲಂಘನೆ ಮಾಡಿದ 34 ರೌಡಿಗಳನ್ನು ಕಾರಗೃಹಕ್ಕೆ […]