ಭೂಗಳ್ಳರಷ್ಟೇ ಅಲ್ಲ, 23 ಕೆರೆಗಳನ್ನು ನುಂಗಿ ನೀರು ಕುಡಿದಿದೆ ಬಿಡಿಎ..!

ಬೆಂಗಳೂರು,ಸೆ.16- ನಗರದಲ್ಲಿದ್ದ ಕೆರೆಗಳನ್ನು ನುಂಗಿ ನೀರು ಕುಡಿದಿರುವುದು ಕೇವಲ ಭೂಗಳ್ಳರು ಹಾಗೂ ಬಿಬಿಎಂಪಿಯವರಲ್ಲ ಇವರ ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಾತ್ರವೂ ಇದೆ. ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವ ಬಿಡಿಎ ಅಧಿಕಾರಿಗಳೇ ನಗರದ ಹಲವಾರು ಕೆರೆಗಳನ್ನು ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿದ್ದಾರೆ. ಕಳೆದ 2013-14ನೇ ಸಾಲಿನಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವ ಬಿಡಿಎ ಕೆರೆ ಅಂಗಳದಲ್ಲಿ ಲೇಔಟ್ ನಿರ್ಮಾಣ ಮಾಡಿ, ಕೋಟಿ ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ. 2014ರಲ್ಲಿ ಕೆರೆ ಒತ್ತುವರಿ ಮಾಡಿ ಲೇಔಟ್ […]