23 ಸಾವಿರ ರೂ.ವಿದ್ಯುತ್ ಬಿಲ್ ನೋಡಿ ಬಡ ಕಾರ್ಮಿಕನಿಗೆ ಶಾಕ್ ..!

ಬೆಂಗಳೂರು,ಅ.31- ಕೂಲಿ-ನಾಲಿ ಮಾಡಿ ಬದುಕುತ್ತಿರುವ ಬಡ ಮನೆ ಮಾಲಿಕರೊಬ್ಬರಿಗೆ ಬೆಸ್ಕಾಂನವರು ಶಾಕ್ ನೀಡಿದ್ದಾರೆ.ಪ್ರತಿ ತಿಂಗಳು 200ರಿಂದ 300 ರೂ. ಕರೆಂಟ್ ಬಿಲ್ ಪಾವತಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಇದೀಗ ಬರೊಬ್ಬರಿ 22 ಸಾವಿರ ರೂ.ಗಳ ವಿದ್ಯುತ್ ಬಿಲ್ ಬಂದಿದೆ. ಬಿಲ್ ಕಂಡೊಡನೆ ಗಾಬರಿಯಾದ ಕೂಲಿ ಕಾರ್ಮಿಕ ಮುಂದೇನೂ ಮಾಡೋದು ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ.ಬನ್ನೇರುಘಟ್ಟ ರಸ್ತೆಯ ದೊಡ್ಡ ಕಮ್ಮನಹಳ್ಳಿಯಲ್ಲಿ ಶಿಟ್ ಮನೆಗೆ 22 ಸಾವಿರ ರೂ.ಗಳ ಕರೆಂಟ್ ಬಿಲ್ ಕಳುಹಿಸಲಾಗಿದೆ. ಹಳೆ ಬಿಲ್ ನಲ್ಲಿ 219, 241,265 […]