ಕುಖ್ಯಾತ ವಾಹನ ಕಳ್ಳರ ಬಂಧನ, 24 ದ್ವಿಚಕ್ರ ವಾಹನಗಳ ವಶ

ಬೆಂಗಳೂರು, ಡಿ.4- ಕೂಲಿಕಾರ್ಮಿಕರ ಶೆಡ್‍ಗಳಲ್ಲಿ ನೆಲಸಿ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಇಬ್ಬರು ಕುಖ್ಯಾತ ವಾಹನ ಕಳ್ಳರನ್ನು ಬಂಧಿಸಿರುವ ಜೆಪಿ ನಗರ ಠಾಣೆ ಪೊಲೀಸರು 16 ಲಕ್ಷ ಮೌಲ್ಯದ 24 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಪ್ಪಳ ಮೂಲದ ರಘು ನಾಯ್ಕ್ ಅಲಿಯಾಸ್ ರಘು ಅಲಿಯಾಸ್ 220 ಮತ್ತು ದೌಲತ್‍ಖಾನ್ ಬಂಧಿತ ಆರೋಪಿಗಳು. ಕೊಪ್ಪಳದಿಂದ ನಗರಕ್ಕೆ ಬಂದ ನಂತರ ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ ಬೆಳ್ಳಂದೂರು ಬಳಿಯ ಕೂಲಿ ಕಾರ್ಮಿಕರು ವಾಸಿಸುವ ಶೆಡ್‍ನಲ್ಲಿ […]