ಬಸ್ ಪಲ್ಟಿ ; 3 ಚುನಾವಣಾ ಸಿಬ್ಬಂದಿ ಸಾವು, 25 ಮಂದಿ ಗಾಯ

ನಬರಂಗಪುರ, ಫೆ.19 ಒಡಿಶಾದ ನಬರಂಗಪುರ ಜಿಲ್ಲೆಯಲ್ಲಿ ಪಂಚಾಯತ್ ಚುನಾವಣಾ ಕರ್ತವ್ಯದಲ್ಲಿದ್ದ ಮೂವರು ಗ್ರಾಮ ರಕ್ಷಕರು ಬಸ್ ಪಲ್ಟಿಯಾಗಿ ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 7.30ರ ಸುಮಾರಿಗೆ ಪಾಪದಹಂಡಿ ಬ್ಲಾಕ್ನ ಮೋಕಿಯಾ ಸಮೀಪದ ಸೊರಿಸ್ಪದರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಫೆಬ್ರವರಿ 20 ರಂದು ನಡೆಯಲಿರುವ ಮೂರನೇ ಹಂತದ ಮತದಾನದಲ್ಲಿ ನಿಯೋಜನೆಗಾಗಿ 45 ಗ್ರಾಮ ರಕ್ಷಕರು ಅಥವಾ ಗ್ರಾಮ ರಾಖಿಗಳೊಂದಿಗೆ ಬಸ್ ಕೊಸಗುಮುಡಾ ಬ್ಲಾಕ್ಗೆ ತೆರಳುತ್ತಿತ್ತು ಎಂದು […]