ಅಂಧ್ರ, ತೆಲಂಗಾಣದ 25 ಕಡೆ ಎನ್‍ಐಎ ದಾಳಿ
ನವದೆಹಲಿ,ಸೆ.18- ಪಿಎಫ್‍ಐನ ಚಟುವಟಿಕೆ ಆಧರಿಸಿ ರಾಷ್ಟ್ರೀಯ ತನಿಖಾ ದಳ ಇಂದು ಅಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ 25ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಆಂಧ್ರಪ್ರದೇಶದ ಕರ್ನೂಲ್, ನೆಲ್ಲೂರೆ, ಕಡಪ, ಗುಂಟೂರು, ತೆಲಂಗಾಣದ ನಿಜಾಮಬಾದ್ ಸೇರಿದಂತೆ ಐದು ಜಿಲ್ಲೆಗಳಲ್ಲಿ ಹಲವು ಅಧಿಕಾರಿಗಳ ತಂಡ ದಾಳಿ ಮಾಡಿದೆ. ಪಿಎಫ್‍ಐ ಸಂಘಟನೆಯ ಅಬ್ದುಲ್ ಖಾದರ್ ಮತ್ತು ಇತರ 26ಕ್ಕೂ ಹೆಚ್ಚು ಮಂದಿ ವಿರುದ್ದ ಎನ್‍ಐಎನ ಹೈದರಾಬಾದ್ ಘಟಕ ಆ.28ರಂದು ಪ್ರಕರಣ ದಾಖಲಿಸಿತ್ತು. ಪಿಎಫ್‍ಐ ಸಂಘಟನೆ ಕೇಂದ್ರ ಸರ್ಕಾರದ […]