ದುರಾಭ್ಯಾಸಗಳಿಗಾಗಿ ಕಳ್ಳತನಕ್ಕಿಳಿದ ಸೆಕ್ಯುರಿಟಿ ಗಾರ್ಡ್ ಅರೆಸ್ಟ್

ಬೆಂಗಳೂರು, ಜು.13-ತನ್ನ ದುರಾಭ್ಯಾಸಗಳ ಖರ್ಚಿಗೆ ಬರುವ ಸಂಬಳ ಸಾಕಾಗದ ಕಾರಣ ದ್ವಿಚಕ್ರ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಗಾರ್ಮೆಂಟ್ಸ್ ಸೆಕ್ಯುರಿಟಿ ಗಾರ್ಡ್‍ನನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 12.5 ಲಕ್ಷ ರೂ. ಬೆಲೆ ಬಾಳುವ 25 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಕೆಂಪೇಗೌಡ ಲೇಔಟ್, ಲಗ್ಗೆರೆಯ ಶ್ರೀನಿವಾಸ್ (39) ಬಂಧಿತ ಸೆಕ್ಯುರಿಟಿ ಗಾರ್ಡ್. ಈತನ ಬಂಧನದಿಂದ ಮಹಾಲಕ್ಷ್ಮೀ ಲೇಔಟ್ ಠಾಣೆಯ 21 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಉಳಿದ 4 ದ್ವಿಚಕ್ರವಾಹನಗಳ ವಾರಸುದಾರರ ಪತ್ತೆ ಕಾರ್ಯ […]