ದೇಶದಲ್ಲಿ ಕೊರೊನಾ ಕೇಕೆ, 24 ಗಂಟೆಯಲ್ಲಿ 3.47 ಲಕ್ಷ ಹೊಸ ಕೇಸ್, 703 ಸಾವು..!

ನವದೆಹಲಿ,ಜ.21- ಭಾರತದಲ್ಲಿ ಹೊಸದಾಗಿ 3,47,254 ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕು ಪ್ರಕರಣಗಳ ಸಂಖ್ಯೆ 3,85,66,027ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ತಾಜಾ ಮಾಹಿತಿ ನೀಡಿದೆ. ಈ ಪೈಕಿ 9,692 ಓಮಿಕ್ರಾನ್ ರೂಪಾಂತರಿ ಪ್ರಕರಣಗಳು ಸೇರಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 20,18,825ಕ್ಕೇರಿದೆ. ಇದು 235 ದಿನಗಳಲ್ಲೇ ಅತ್ಯಕ ಪ್ರಮಾಣವಾಗಿದೆ. ಕಳೆದ 24 ಗಂಟೆಗಳಲ್ಲಿ 703 ಮಂದಿ ಕೋವಿಡ್‍ಗೆ ಬಲಿಯಾಗುವುದರೊಂದಿಗೆ ಒಟ್ಟಾರೆ ಕೋವಿಡ್ ಮರಣಗಳ ಪ್ರಮಾಣ 4,88,396ಕ್ಕೆ ತಲುಪಿದೆ. ಗುರುವಾರದಿಂದೀಚೆಗೆ ಓಮಿಕ್ರಾನ್ […]