ಮಳೆಯಿಂದ ಹಾನಿಗೊಳಗಾದ 27 ಸಾವಿರ ಶಾಲಾ ಕೊಠಡಿಗಳ ದುರಸ್ತಿ: ಸಚಿವ ನಾಗೇಶ್

ಬೆಳಗಾವಿ, ಡಿ.29-ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ಹಾನಿಗೊಳಗಾದ ಒಟ್ಟು 27,470 ಶಾಲಾ ಕೊಠಡಿಗಳು ದುರಸ್ತಿಯಾಗಬೇಕಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರಸ್ತುತ 42.239 ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ ಸಣ್ಣ ಮಟ್ಟದ 13,107, ದೊಡ್ಡ ಮಟ್ಟದ 14,373 ಸೇರಿದಂತೆ ಒಟ್ಟು 27,480ಶಾಲೆಗಳು ದುರಸ್ತಿಯಾಗಬೇಕೆಂದು ತಿಳಿಸಿದರು. ರಾಜ್ಯದಲ್ಲಿ 4,819 ಪ್ರೌಢಶಾಲೆಗಳಿವೆ ಇದರಲ್ಲಿ ಸಣ್ಣ ಪ್ರಮಾಣದ್ದು 1365, ದೊಡ್ಡ ಮಟ್ಟದ ದುರಸ್ತಿ 1056 ಸೇರಿದಂತೆ 2421 ಪ್ರೌಢಶಾಲೆಗಳನ್ನು […]