ದೇಶದಲ್ಲಿ ಕಂಟ್ರೋಲ್‍ಗೆ ಬಂದ ಕೊರೋನಾ, 30,000 ಸಾವಿರಕ್ಕೆ ಕುಸಿದ ಸೋಂಕಿತರ ಸಂಖ್ಯೆ

ನವದೆಹಲಿ, ಫೆ.15- ಭಾರತದಲ್ಲಿ ಕಳೆದ 44 ದಿನಗಳಲ್ಲೇ ಕಡಿಮೆ ಅಂದರೆ 30,000 ದೈನಿಕ ಕೊರೊನಾ ಪ್ರಕರಣಗಳು ಹೊಸದಾಗಿ ದೃಢಪಟ್ಟಿದ್ದು ದೇಶದ ಒಟ್ಟಾರೆ ಕೋವಿಡ್-19 ಸೋಂಕಿನ ಪ್ರಕರಣಗಳು 4,26,92 943ಕ್ಕೆ ತಲುಪಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ಬೆಳಗ್ಗೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಅವಯಲ್ಲಿ 347 ಮಂದಿ ಕೊರೊನಾದಿಂದ ಮೃತಪಟ್ಟಿದ್ದು , ಒಟ್ಟಾರೆ ಕೋವಿಡ್-19 ಮರಣ ಪ್ರಮಾಣ 5,09,358ಕ್ಕೆ ಏರಿಕೆಯಾಗಿದೆ. ಸತತ 9 ದಿನಗಳಿಂದ ದೈನಿಕ ಕೋವಿಡ್-19 ಪ್ರಕರಣಗಳು ಒಂದು ಲಕ್ಷಕ್ಕಿಂತ ಕಡಿಮೆ ದಾಖಲಾಗಿವೆ. […]