24 ಗಂಟೆಗಳಲ್ಲಿ 5921 ಮಂದಿಗೆ ಕೊರೊನಾ, 289 ಸಾವು
ನವದೆಹಲಿ, ಮಾ.5-ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 5921 ಕೊರೊನಾ ಪ್ರಕರಣಗಳು ದಾಖಲಾಗಿದ್ದರೆ, ಮಹಾಮಾರಿಗೆ 289 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಕೊರೊನಾ ಸೋಂಕಿನ ಸಂಖ್ಯೆ 63,878ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ದಿನೇ ದಿನೇ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಸೋಂಕಿನ ಪ್ರಮಾಣ ಶೇ.0.15ಕ್ಕೆ ಕುಸಿದಿದ್ದರೆ, ಕೊರೊನಾ ಮಹಾಮಾರಿಯಿಂದ ಇದುವರೆಗೂ ಪ್ರಾಣ ಕಳೆದುಕೊಂಡವರ ಸಂಖ್ಯೆ 5,14,878ಕ್ಕೆ ಏರಿಕೆಯಾಗಿದ್ದರೆ, ಚೇತರಿಕೆ ಪ್ರಮಾಣ ಶೆ.98.65ರಷ್ಟಿದೆ.