ಮ್ಯಾನ್ಮಾರ್ ನ 29 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಮಿಜೋರಾಂನಲ್ಲಿ ಅವಕಾಶ

ಐಜ್ವಾಲ್, ಫೆ.23- ಕಳೆದ ವರ್ಷ ನಡೆದ ದೌರ್ಜನ್ಯಗಳನ್ನು ಎದುರಿಸಿ ಪೋಷಕರೊಂದಿಗೆ ಮ್ಯಾನ್ಮಾರ್‍ನಿಂದ ಪಲಾಯನಗೈದು ಮಿಜೋರಾಂನಲ್ಲಿ ಆಶ್ರಯ ಪಡೆದಿದ್ದ 29 ಬಾಲಕ ಮತ್ತು ಬಾಲಕಿಯರು 10 ಮತ್ತು 12 ನೇ ತರಗತಿಯ ರಾಜ್ಯ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ಸಿದ್ಧರಾಗಿದ್ದಾರೆ. 27 ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆಗೆ ಮತ್ತು ಇಬ್ಬರು 12ನೇ ತರಗತಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಿಜೋರಾಂ ಶಿಕ್ಷಣ ಸಚಿವ ಲಾಲಛಂದಮಾ ರಾಲ್ಟೆ ಬುಧವಾರ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪೋಷಕರೊಂದಿಗೆ ದಕ್ಷಿಣ ಮಿಜೋರಾಂನ ಸಿಯಾಹಾ ಜಿಲ್ಲೆ ಮತ್ತು ಮ್ಯಾನ್ಮಾರ್ […]