ದರೋಡೆಕೋರರ ಸೆರೆ, 2500 ರೂ., ವಾಹನ ವಶ

ಬೆಂಗಳೂರು, ಫೆ.18- ಇಬ್ಬರು ದರೋಡೆಕೋರರನ್ನು ಬಂಧಿಸಿರುವ ಬಾಗಲೂರು ಠಾಣೆ ಪೊಲೀಸರು 2,500 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಸೈಯದ್ ಇಮ್ರಾನ್(28) ಮತ್ತು ಅಪ್ಸರ್ ಬೇಗ್(19) ಬಂಧಿತ ದರೋಡೆಕೋರರು. ಫೆ.7ರಂದು ಕಣ್ಣೂರು- ಬೆಳ್ಳಹಳ್ಳಿ ರಸ್ತೆಯ ಪುನರ್‍ವಿ ಕಾಂಡಿಮೇಟ್ಸ್ ಸಮೀಪ ಸತೀಶ್ ಎಂಬುವರು ನಿಂತಿದ್ದಾಗ ಸ್ಕೂಟಿಯಲ್ಲಿ ಬಂದ ಇಬ್ಬರು ದರೋಡೆಕೋರರು ಚಾಕು ತೋರಿಸಿ, ಬೆದರಿಸಿ ಅವರ ಬಳಿ ಇದ್ದ ಹಣ ಬ್ಯಾಗ್ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ತಕ್ಷಣ ಸತೀಶ್ ಅವರು ಪ್ರತಿರೋಸಿದಾಗ ಚಾಕುವಿನಿಂದ ಹಲ್ಲೆ ಮಾಡಿ ಬ್ಯಾಗ್‍ನ್ನು […]