ದೇಶದ ಆರ್ಥಿಕತೆ ಅತಿಕ್ಷಿಪ್ರ ವೇಗದಲ್ಲಿ ಚೇತರಿಕೆ
ನವದೆಹಲಿ,ಆ.1- ಕೋವಿಡ್ ಬಳಿಕ ದೇಶದ ಆರ್ಥಿಕತೆ ಅತಿಕ್ಷಿಪ್ರ ವೇಗದಲ್ಲಿ ಚೇತರಿಸಿಕೊಳ್ಳುತ್ತಿದ್ದು, ಜಿಎಸ್ಟಿ ಜಾರಿಯಾದ ಬಳಿಕ 2ನೇ ಬಾರಿಗೆ ದಾಖಲಾರ್ಹ ಮಟ್ಟದಲ್ಲಿ ಅತಿ ಹೆಚ್ಚು ತೆರಿಗೆ ವಸೂಲಿಯಾಗಿದೆ. ಕಳೆದ ವರ್ಷ ಜುಲೈಗೆ ಹೋಲಿಸಿದರೆ ಈವರೆಗೂ ಇದು ಅತಿಹೆಚ್ಚು ಸಂಗ್ರಹಿತ ತೆರಿಗೆ ಎಂದು ಕೇಂದ್ರ ಸರ್ಕಾರದ ಹಣಕಾಸು ಇಲಾಖೆ ತಿಳಿಸಿದೆ. ಕಳೆದ ಜುಲೈ ತಿಂಗಳಿನಲ್ಲಿ ಒಟ್ಟು 1,48,995 ಕೋಟಿ ಜಿಎಸ್ಟಿ ವಸೂಲಿಯಾಗಿದೆ. ಇದರಲ್ಲಿ ಕೇಂದ್ರ ಜಿಎಸ್ಟಿ 25,751, ರಾಜ್ಯ ಜಿಎಸ್ಟಿ 38,700, ಅಂತಾರಾಷ್ಟ್ರೀಯ ಜಿಎಸ್ಟಿ 79,518 ಅದರಲ್ಲಿ 41,420 ಕೋಟಿ […]