ಆರೋಪಿ ಸೆರೆ : 5.15 ಲಕ್ಷ ಮೌಲ್ಯದ 3 ಕಾರು- 2 ಬೈಕ್‍ಗಳ ವಶ

ಬೆಂಗಳೂರು, ಡಿ.22- ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡು ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ 5.15 ಲಕ್ಷ ರೂ. ಬೆಲೆಬಾಳುವ ಮೂರು ಕಾರುಗಳು ಹಾಗೂ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಸದ್ದಾಂ ಹುಸೇನ್ ಅಲಿಯಾಸ್ ತಬ್ರೇಜ್ ಅಲಿಯಾಸ್ ಸದ್ದಾಂ(30) ಬಂಧಿತ ಆರೋಪಿ.ದೊಡ್ಡಬೆಟ್ಟಹಳ್ಳಿ ನಿವಾಸಿ ಕಂಚಿ ರೆಡ್ಡಿಗಾರಿ ಜನಾರ್ಧನ್ ಎಂಬುವವರು ಕಳೆದ ನ.17ರಂದು ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಮನೆಯ ಮುಂಭಾಗದ ರಸ್ತೆಯಲ್ಲಿ ಮಾರುತಿ ಸುಜುಕಿ ಕಾರನ್ನು ನಿಲ್ಲಿಸಿ ಊರಿಗೆ ಹೋಗಿದ್ದರು. ನ.23ರಂದು […]
6 ಮಂದಿ ಡಕಾಯಿತರ ಬಂಧನ : 16 ಲಕ್ಷ ಬೆಲೆಬಾಳುವ BMW ಬೈಕ್, 3 ಕಾರು ವಶ

ಬೆಂಗಳೂರು, ಡಿ. 22- ಬೈಕ್ ಖರೀದಿ ನೆಪದಲ್ಲಿ ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ವಾಹನದೊಂದಿಗೆ ಪರಾರಿಯಾಗಿದ್ದ ಆರು ಮಂದಿ ಡಕಾಯಿತರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿ 16 ಲಕ್ಷ ಬೆಲೆಬಾಳುವ ಬಿಎಂಡಬ್ಲ್ಯೂ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ್ದ 31 ಲಕ್ಷ ಮೌಲ್ಯದ ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಶ್ವಾಸ್(23), ಜಗನ್ನಾಥ್(21), ಗಜೇಂದ್ರ(34), ಲಿಖಿತ್ ಕುಮಾರ್(29), ಶಶಾಂಕ್(23) ಮತ್ತು ಪವನ್(21) ಬಂಧಿತ ಡಕಾಯಿತರು. ಕಳೆದ ನ.10ರಂದು ಸಂಜೆ 6.30ರ ಸುಮಾರಿಗೆ ವಿಶ್ವಾಸ್ ಮತ್ತು ಆತನ ಸಂಗಡಿಗರು ಬೈಕ್ ಖರೀದಿ […]
ಕಳ್ಳತನ ಮಾಡಿದ್ದ ಆರೋಪಿ ಅರೆಸ್ಟ್ : 15 ಲಕ್ಷ ಮೌಲ್ಯದ ಚಿನ್ನಾಭರಣ, 3 ಕಾರುಗಳ ಜಪ್ತಿ
ಬೆಂಗಳೂರು, ಸೆ.17- ಮನೆಯ ಬೀಗ ಮೀಟಿ ಒಳ ನುಗ್ಗಿ ಚಿನ್ನದ ಆಭರಣಗಳು, ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯೊಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ 3 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಬಸವನ ಪುರ ಗ್ರಾಮದ ಮೊಹಮ್ಮದ್ ತೌಹಿದ್ ಅಲಿಯಾಸ್ ತೌಹಿದ್(20) ಬಂಧಿತ ಆರೋಪಿ.ಜೂನ್ 10ರಂದು ರಾತ್ರಿ ಎಂ.ಪಿ.ಎಂ. ಲೇಔಟ್‍ನ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್‍ನ ಮನೆಯೊಂದರ ಮುಂಭಾಗಿಲು ಬೀಗ ಮೀಟಿ ಚಿನ್ನದ […]