ಕೆರೆಯಲ್ಲಿ ಏಡಿ ಹಿಡಿಯಲು ಹೋದ 3 ಮಕ್ಕಳು ನೀರು ಪಾಲು
ತುಮಕೂರು, ಜ.30- ಕುರಿ ಮೇಯಿಸುವ ವೇಳೆಯಲ್ಲಿ ಕೆರೆಯ ಗುಂಡಿಯಲ್ಲಿ ಏಡಿ ಹಿಡಿಯಲು ಹೋದ ಒಂದೇ ಕುಟುಂಬದ ಮೂವರು ಮಕ್ಕಳು ಕಾಲುಜಾರಿ ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಪಾವಗಡದಲ್ಲಿ ನಡೆದಿದೆ. ಮೃತರನ್ನು ದೇವರಾಯನ ರೊಪ್ಪದ ಷರೀಫ್(10), ಬಾನ ವಿ(13), ಚಾಂದ್ ಬಿ(14) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕುರಿ ಮೇಯಿಸುವ ಸಲುವಾಗಿ ಎಸ್‍ಆರ್‍ಪಾಳ್ಯದ ಕೆರೆ ಬಳಿ ಆಗಮಿಸಿದ್ದರು. ಈ ವೇಳೆ ಏಡಿ ಹಿಡಿಯಲು ಕೆರೆಯ ಗುಂಡಿಗೆ ಇಳಿದು ಮೂವರೂ ಕಾಲು ಜಾರಿಬಿದ್ದಿದ್ದಾರೆ. ಗ್ರಾಮಸ್ಥರು ನೀರಿನಿಂದ ಹೊರತೆಗೆಯುವ ವೇಳೆಗೆ ಮೂವರ ಪ್ರಾಣಪಕ್ಷಿ […]