ಬೆಂಗಳೂರಲ್ಲಿ ಬರೋಬ್ಬರಿ 3 ಕೋಟಿ ಮೌಲ್ಯದ ಡ್ರಗ್ಸ್ ವಶ, ನೈಜೀರಿಯಾದ ಇಬ್ಬರು ಅರೆಸ್ಟ್

ಬೆಂಗಳೂರು,ಜ.29- ಕಾಲೇಜು ವಿದ್ಯಾರ್ಥಿಗಳು, ಸೆಲಿಬ್ರಿಟಿಗಳು ಹಾಗೂ ಉದ್ಯಮಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ನೈಜೀರಿಯಾ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಗೋವಿಂದಪುರ ಠಾಣೆ ಪೊಲೀಸರು ಮೂರು ಕೋಟಿ ರೂ. ಮೌಲ್ಯದ ಮಾದಕದ್ರವ್ಯ ವಶಪಡಿಸಿಕೊಂಡಿದ್ದಾರೆ. ನೈಜೀರಿಯಾ ಮೂಲದ ಸಿಕ್ಟಸ್ ಉಚೇಕ್ (30) ಹಾಗೂ ಚುಕುಬೆಮ್ ಹೆನ್ರಿ(34) ಬಂತ ಆರೋಪಿಗಳು. ಹೊರಮಾವಿನಲ್ಲಿರುವ ನ್ಯೂರಾಜಣ್ಣ ಬಡಾವಣೆಯಲ್ಲಿ ವಾಸಿಸುತ್ತಿದ್ದ ಆರೋಪಿಗಳು ಎಚ್‍ಬಿಆರ್ ಬಡಾವಣೆ 5ನೇ ಹಂತದಲ್ಲಿರುವ ಅಂಬೇಡ್ಕರ್ ಮೈದಾನದ ಬಳಿ ಸೆಲಿಬ್ರಿಟಿಗಳು, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದಾರೆ ಎಂಬ […]