ಉಕ್ರೇನ್ ಜನವಸತಿ ಕಟ್ಟಡದ ಮೇಲೆ ರಷ್ಯಾ ರಾಕೆಟ್ ದಾಳಿ, ಮೂವರ ಸಾವು

ಉಕ್ರೇನ್,ಫೆ.2- ಜನವಸತಿ ಕಟ್ಟಡದ ಮೇಲೆ ರಷ್ಯಾ ನಡೆಸಿದ ರಾಕೆಟ್ ದಾಳಿಗೆ ಮೂವರು ಬಲಿಯಾಗಿದ್ದು, 20ಕ್ಕೂ ಹೆಚ್ಚು ನಾಗರೀಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಪೂರ್ವ ನಗರದ ಕ್ರಾಮಾಟೋಸ್ರ್ಕ್‍ನಲ್ಲಿ ನಡೆದಿದೆ. ಎರಡು ಗಂಟೆಗಳ ಹಿಂದೆ, ರಷ್ಯಾದ ಆಕ್ರಮಣಕಾರರು ನಗರದ ಮಧ್ಯಭಾಗದಲ್ಲಿರುವ ವಸತಿ ಕಟ್ಟಡವನ್ನು ರಾಕೆಟ್‍ನಿಂದ ಹೊಡೆದು ಅದನ್ನು ಸಂಪೂರ್ಣವಾಗಿ ನಾಶಪಡಿಸಿದರು ಎಂದು ಪ್ರಾದೇಶಿಕ ಗವರ್ನರ್ ಪಾವ್ರೋ ಕಿರಿಲೆಂಕೊ ತಿಳಿಸಿದ್ದಾರೆ. ಸ್ಥಳೀಯ ಪೊಲೀಸರು ತಮ್ಮ ಅಧಿಕೃತ ವೆಬ್‍ಸೈಟ್‍ನಲ್ಲಿ ಮೂವರು ನಾಗರಿಕರು ಹತರಾಗಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ […]

ದಟ್ಟ ಮಂಜು ; ಟ್ರಕ್‍ಗೆ ಬಸ್ ಅಪ್ಪಳಿಸಿ ಮೂರು ಸಾವು

ಲಕ್ನೋ,ಜ.9- ವೇಗವಾಗಿ ಸಂಚರಿಸುತ್ತಿದ್ದ ಬಸ್ ನಿಂತಿದ್ದ ಟ್ರಕ್‍ಗೆ ಡಿಕ್ಕಿ ಹೊಡೆದು ಮೂರು ಮಂದಿ ಸಾವನ್ನಪ್ಪಿ ಇತರ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಕ್ನೋ-ಆಗ್ರಾ ಎಕ್ಸ್‍ಪ್ರೆಸ್‍ವೇಯಲ್ಲಿ ನಡೆದಿದೆ. ಉತ್ತರಪ್ರದೇಶದ ಥಾಥೀಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಟ್ಟವಾದ ಮಂಜು ತುಂಬಿದ್ದರಿಂದ ಬಸ್ ಚಾಲಕನಿಗೆ ರಸ್ತೆಯಲ್ಲಿ ನಿಂತಿದ್ದ ಟ್ರಕ್ ಕಾಣಿಸದ ಹಿನ್ನೆಲೆಯಲ್ಲಿ ಈ ಅಪಘಾತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್‍ನಲ್ಲಿ 40ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು ಅವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದ್ದು, 18ಕ್ಕೂ ಹೆಚ್ಚು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು […]

ದುರ್ಗಾಪೂಜಾ ಪೆಂಡಲ್‍ಗೆ ಬೆಂಕಿಬಿದ್ದು ಮೂವರ ಸಾವು, 64 ಮಂದಿ ಗಾಯ

ಭದೋಹಿ (ಯುಪಿ), ಅ.3-ಇಲ್ಲಿನ ದುರ್ಗಾಪೂಜಾ ಪೆಂಡಲ್‍ಗೆ ಬೆಂಕಿ ಹೊತ್ತಿಕೊಂಡು ಮೂವರು ಸಾವನ್ನಪ್ಪಿ ,64 ಮಂದಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ನಾರ್ತುವಾ ಗ್ರಾಮದ ನಡೆದಿದೆ. ದುರ್ಗಾ ಪೂಜೆಯ ಪೆಂಡಾಲ್‍ನಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ಡಿಜಿಟಲ್ ಶೋ ನಡೆಯುತ್ತಿದ್ದು ಸುಮಾರು 400 ಮಂದಿ ನೋಡುತ್ತಿದ್ದರು ಹ್ಯಾಲೊಜೆನ್ ಲೈಟ್ ಹೆ ಬಿಸಿಯಾದ ಬಟ್ಟೆದೆ ಬೆಂಕಿ ಹೊತ್ತಿಕೊಂಡು ಇಡೀ ಪೆಂಡಾಲ್ ಬೂದಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಔರೈ ಪೊಲೀಸ್ ಠಾಣೆಯಿಂದ ಸಮೀಪದಲ್ಲೇ ಇರುವ ನಾರ್ತುವಾ ಗ್ರಾಮದ ದುರ್ಗಾಪೂಜಾ ಕಾರ್ಯಕ್ರಮ ಕಳೆದ 7 ದಿನದಿಂದ […]

ಮನೆ ಕುಸಿದು 3 ಮಂದಿ ಸಾವು

ಶಿಮ್ಲಾ, ಆ.20 -ಹಿಮಾಚಲ ಪ್ರದೇಶದ ಚಂಬಾ ಜಿಲ್ಲೇಯಲ್ಲಿ ಇಂದು ಮುಂಜಾನೆ ಸುರಿದ ಭಾರಿ ಮಳೆಯಿಂದ ಉಂಟಾದ ಭೂಕುಸಿತದಿಂದಾಗಿ ಮನೆ ಮಣ್ಣಿನಡೆ ಸಿಲುಕಿ ಮೂವರು ಸಾವನ್ನಪ್ಪಿದ್ದಾರೆ. ತುರ್ತು ಕಾರ್ಯಾಚರಣೆ ಕೇಂದ್ರದ (ಡಿಇಒಸಿ) ಅಧಿಕಾರಿಗಳ ಮಾಹಿತಿ ನೀಡಿ ಬೆಳಿಗ್ಗೆ 4.30 ರ ಸುಮಾರಿಗೆ ಚೌವರಿ ತೆಹಸಿಲನ್‍ಬಾನೆಟ್ ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ ಎಂದು ತಿಳಿಸಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಅವರ ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ರಾಜ್ಯದ ಮಂಡಿ ಜಿಲ್ಲೇಯಲ್ಲಿ ಹಠಾತ್ ಪ್ರವಾಹದ ನಂತರ ಅವರ ಮನೆಗಳಿಗೆ, ಅಂಗಡಿಗಳಿಗೆ ನೀರು […]