ತಿಂಗಳುಗಟ್ಟಲೆ ತಾಯಿಯ ಶವ ಬಚ್ಚಿಟ್ಟಿದ್ದ ಮಗಳು

ಮುಂಬೈ,ಮಾ.15- ಮಗಳು ತನ್ನ ತಾಯಿಯ ಶವವನ್ನು ತಿಂಗಳುಗಟ್ಟಲೆ ಪ್ಲಾಸ್ಟಿಕ್ ಚೀಲದಲ್ಲಿ ಬಚ್ಚಿಟ್ಟಿದ್ದ ಆಘಾತಕಾರಿ ಘಟನೆ ಮುಂಬೈನ ಲಾಲ್‍ಭಾಗ್ ಪ್ರದೇಶದಲ್ಲಿ ನಡೆದಿದೆ. 53 ವರ್ಷದ ಮಹಿಳೆಯ ಶವ ಪ್ಲಾಸ್ಟಿಕ್ ಚೀಲದೊಳಗೆ ಪತ್ತೆಯಾಗಿದ್ದು, ಶವವನ್ನು ತಿಂಗಳುಗಟ್ಟಲೆ ಬಚ್ಚಲಲ್ಲಿ ಇಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತ ಮಹಿಳೆಯ ಮಗಳು 21 ವರ್ಷದವಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಮೃತ ಮಹಿಳೆಯ ಸಹೋದರ ಮತ್ತು ಸೋದರಳಿಯ ನಿನ್ನೆ ಕಲಾಚೌಕಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಡಿಸಿಪಿ ಪ್ರವೀಣ್ ಮುಂದೆ ತಿಳಿಸಿದ್ದಾರೆ. ಮಹಿಳೆ ವಾಸಿಸುತ್ತಿದ್ದ […]

ಬೆಸ್ಕಾಂ ಬ್ರಹ್ಮಾಸ್ತ್ರ : 3 ತಿಂಗಳ ಬಿಲ್ ಕಟ್ಟದಿದ್ದರೆ ಪರವಾನಗಿ ರದ್ದು

ಬೆಂಗಳೂರು,ನ.16- ಇನ್ಮುಂದೆ ವಿದ್ಯುತ್ ಬಿಲ್ ಪಾವತಿಸಲು ವಿಳಂಬ ಧೋರಣೆ ಅನುಸರಿಸಿದರೆ ನೀವು ನಿಮ್ಮ ಮನೆಯ ವಿದ್ಯುತ್ ಸಂಪರ್ಕವನ್ನೇ ಕಡಿದುಕೊಳ್ಳಬೇಕಾಗುತ್ತದೆ ಜೋಕೆ… ಜನರಿಗೆ ಪದೆ ಪದೆ ಶಾಕ್ ನೀಡಿ ಬೆಚ್ಚಿ ಬೀಳಿಸುವ ಬೆಸ್ಕಾಂನವರು ಇದೀಗ ಮತ್ತೊಂದು ಬಿಗ್ ಶಾಕ್ ನೀಡಿದ್ದಾರೆ.ಅದೆನೆಂದರೆ ನೀವು ನಿಮ್ಮ ಮನೆಯ ವಿದ್ಯುತ್ ಬಿಲ್ ಅನ್ನು ಮೂರು ತಿಂಗಳು ಕಟ್ಟದೆ ಬಾಕಿ ಉಳಿಸಿಕೊಂಡರೆ ನಿಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆಯಂತೆ. ಇದುವರೆಗೂ ವಿದ್ಯುತ್ ಬಿಲ್ ಪಾವತಿಸದಿದ್ದರೆ ಬೆಸ್ಕಾಂ ಸಿಬ್ಬಂದಿಗಳು ಬಿಲ್ ಪಾವತಿಸದ ಮನೆಯವರ ವಿದ್ಯುತ್ ಸಂಪರ್ಕದ […]