ಪಬ್‌ಜಿ ಎಫೆಕ್ಟ್ : ಗುಂಡಿಕ್ಕಿ ಕುಟುಂಬವನ್ನೇ ನಾಶ ಮಾಡಿದ ಬಾಲಕ..!
ಲಾಹೋರ್,ಜ.29- ಪಬ್ಜಿ ಪ್ರಭಾವಕ್ಕೆ ಒಳಗಾಗಿದ್ದ ಬಾಲಕನೊಬ್ಬ ತಾಯಿ, ಅಣ್ಣ ಮತ್ತು ಇಬ್ಬರು ಸಹೋದರಿಯರಿಗೆ ಗುಂಡಿಕ್ಕಿ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿರುವ ಘಟನೆ ಪಾಕಿಸ್ತಾನದ ಲಾಹೋರ್‍ನಲ್ಲಿ ನಡೆದಿದೆ. ನಹಿದ(45), ತೈಮುರ್(22), 17 ವರ್ಷದ ಇಬ್ಬರು ಹೆಣ್ಣು ಮಕ್ಕಳು ಗುಂಡಿಗೆ ಬಲಿಯಾಗಿದ್ದು, ಘಟನೆ ಬಳಿಕ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಬೈಲ್ ಪಬ್ಜಿ ಗೇಮ್ ಎಫೆಕ್ಟ್‍ನಿಂದ ಬಾಲಕ ತನ್ನ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿ ಜೈಲು ಪಾಲಾಗಿದ್ದಾನೆ. ಈತ ಸದಾ ಪಬ್ಜಿ ಗೇಮ್‍ನಲ್ಲಿ ತೊಡಗಿರುತ್ತಿದ್ದ. ಪರಿಣಾಮ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ […]