ಮುಂದುವರಿದ ಬಿಡಿಎ ಒತ್ತುವರಿ ತೆರವು : 30 ಕೋಟಿ ಮೌಲ್ಯದ ಸ್ವತ್ತು ವಶ

ಬೆಂಗಳೂರು, ಜ.5- ಪ್ರತಿಷ್ಠಿತ ಆರ್‍ಎಂವಿ ಎರಡನೇ ಹಂತದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಜಾಗದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದ್ದ ಶೆಡ್‍ಗಳನ್ನು ತೆರವುಗೊಳಿಸಿ ಸುಮಾರು 30 ಕೋಟಿ ರೂ.ಮೌಲ್ಯದ ಆಸ್ತಿಯನ್ನು ವಶಪಡಿಸಿ ಕೊಳ್ಳಲಾಗಿದೆ. ನಾಗಶೆಟ್ಟಿಹಳ್ಳಿಯ ಆರ್‍ಎಂವಿ 2ನೇ ಹಂತದಲ್ಲಿರುವ ಸರ್ವೆ ನಂಬರ್ 71/3 ರಲ್ಲಿನ 32 ಗುಂಟೆ ಜಾಗ ಬಿಡಿಎಗೆ ಸೇರಿತ್ತು. ಆದರೆ, ಈ ಜಾಗದಲ್ಲಿ ಎನ್ ಐ ಸೊಸೈಟಿಯವರು ಅನಕೃತವಾಗಿ ತಾತ್ಕಾಲಿಕ ಶೆಡ್ ಗಳನ್ನು ನಿರ್ಮಾಣ ಮಾಡಿದ್ದರು. ಸದರಿ ಜಾಗವನ್ನು ತೆರವುಗೊಳಿಸುವಂತೆ ಹಲವು ಬಾರಿ ಸೂಚನೆ ನೀಡಿದ್ದರೂ […]