ಫಿಲಿಪೈನ್ಸ್ ನಲ್ಲಿ ಭಾರಿ ಮಳೆ, ಪ್ರವಾಹಕ್ಕೆ 32 ಮಂದಿ ಸಾವು

ಮನಿಲಾ, ಡಿ 29 – ಫಿಲಿಪೈನ್ಸ್ ದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಮನೆಗಳು, ವಾಹನಗಳು ಧ್ವಂಸಗೊಂಡಿದ್ದು ದುರಂತದಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಕಾಣೆಯಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಸಂಸ್ಥೆ ತಿಳಿಸಿದೆ. ಪೂರ್ವ, ಮಧ್ಯ ಮತ್ತು ದಕ್ಷಿಣ ಫಿಲಿಪೈನ್ಸ್‍ನಲ್ಲಿ ಹವಾಮಾನ ವೈಪರಿತ್ಯದಿಂದ ಸುಮಾರು 56 ಸಾವಿರಕ್ಕೂ ಹೆಚ್ಚು ಜನರು ತುರ್ತು ಆಶ್ರಯದಲ್ಲಿದ್ದಾರೆ. ಮಿಸಾಮಿಸ್ ಆಕ್ಸಿಡೆಂಟಲ್‍ನ ದಕ್ಷಿಣ ಪ್ರಾಂತ್ಯದ ಪರಿಸ್ಥತಿ ಬೀಕರವಾಗಿದೆ. ಕರಾವಳಿ ಕಾವಲು ಪಡೆ ರಕ್ಷಕರು ಹಗ್ಗವನ್ನು ಬಳಸಿ […]