500ಕೆಜಿ ನಿಷೇಧಿತ ಪ್ಲಾಸ್ಟಿಕ್ ಸೀಜ್, 34 ಸಾವಿರ ರೂ.ದಂಡ

ಬೆಂಗಳೂರು,ಡಿ.3- ರಾಜರಾಜೇಶ್ವರಿ ನಗರ ವಲಯದ ಯಶವಂತಪುರ ಹಾಗೂ ಪೀಣ್ಯ ಇಂಡಸ್ಟ್ರಿಯಲ್ ಪ್ರದೇಶಗಳಲ್ಲಿ ದಾಳಿ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು 500 ಕೆ.ಜಿ ನಿಷೇದಿತ ಪ್ಲಾಸ್ಟಿಕ್ ವಶಪಡಿಸಿಕೊಂಡು 34 ಸಾವಿರ ದಂಡ ವಿಧಿಸಿದ್ದಾರೆ. ರಾಜರಾಜೇಶ್ವರಿ ನಗರ ವಲಯದ ಹೆಚ್‍ಎಂಟಿ ವಾರ್ಡ್ ವ್ಯಾಪ್ತಿಯಲ್ಲಿನ ಯಶವಂತಪುರ ಇಂಡಸ್ಟ್ರಿಯಲ್ ಪ್ರದೇಶದ 5ನೇ ಮುಖ್ಯರಸ್ತೆಯಲ್ಲಿ ಬರುವ ಮಹಾವೀರ್ ಪಾಲಿ ಪ್ಯಾಕ್ ವೈಭವ ಪ್ರಿಂಟ್ ಪ್ಯಾಕ್ ಪ್ಲಾಸ್ಟಿಕ್ ತಯಾರಿಕಾ ಘಟಕಕ್ಕೆ ಘನತ್ಯಾಜ್ಯ ನಿರ್ವಹಣೆ ವಿಭಾಗದ ಕಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ ಮಾರ್ಷಲ್ ಗಳ ತಂಡ ಜಂಟಿ ಕಾರ್ಯಾಚರಣೆ […]