ಚೀನಾದಲ್ಲಿ ಕೈಗಾರಿಕಾ ಸಗಟು ಕೇಂದ್ರದಲ್ಲಿ ಬೆಂಕಿ, 36 ಕಾರ್ಮಿಕರ ಸಾವು

ಬೀಜಿಂಗ್, ನ.22 -ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ರಾಸಾಯನಿಕ ಮತ್ತು ಕೈಗಾರಿಕಾ ಸರಕುಗಳನ್ನು ಪೂರೈಸುವ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡು 36 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದು ,ಇಬ್ಬರು ನೌಕರರು ಕಾಣೆಯಾಗಿದ್ದಾರೆ ಎಂದು ಅನ್ಯಾಂಗ್ ನಗರದ ಸ್ಥಳೀಯ ಸರ್ಕಾರ ಹೇಳಿಕೆಯಲ್ಲಿ ತಿಳಿಸಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಬಂದು ನಾಲ್ಕು ಗಂಟೆ ಸತತ ಪ್ರಯತ್ನ ನೆಡಸಿ ಬೆಂಕಿಯನ್ನು ಸಂಪೂರ್ಣ ನಂದಿಸಿದ್ದಾರೆ, ಬೆಂಕಿಯ ಕಾರಣ ಅಥವಾ ಎಷ್ಟು ಉದ್ಯೋಗಿಗಳು ಇದ್ದರು ಮತು ಸತ್ತರು ಎಂಬುದರ ಕುರಿತು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ, ಕಳಪೆ […]